ರಾಷ್ಟ್ರೀಯ

ಒಂದೇ ಕುಟುಂಬದ 10 ಜನರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್?

Pinterest LinkedIn Tumblr

murder-new
ಅಮೇಥಿ: ಉತ್ತರ ಪ್ರದೇಶದ ಅಮೇಥಿಯ ಮನೋವಾದಲ್ಲಿ ಬುಧವಾರ ನಡೆದ ಒಂದೇ ಕುಟುಂಬದ 11 ಜನರ ನಿಗೂಢ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಮನೆಯ ಯಜಮಾನನೇ ತನ್ನ ಕುಟುಂಬದ ಸದಸ್ಯರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಆರೋಪಿ ಜಮುಲು(45) ಮೊದಲು ತನ್ನ ಕುಟುಂಬದ 12 ಜನ ಸದಸ್ಯರಿಗೆ ಊಟದಲ್ಲಿ ಕೀಟನಾಶಕ ಬೆರೆಸಿ ತಿನ್ನಿಸಿದ್ದಾನೆ. ಬಳಿಕ
ಮಾರಕಾಯುಧದಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಪರಿಣಾ 12 ಜನರಲ್ಲಿ 10 ಜನ ಸಾವನ್ನಪ್ಪಿದ್ದು ಮತ್ತೀರ್ವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೃತರಲ್ಲಿ 8 ಮಂದಿ ಮಕ್ಕಳು, ಇಬ್ಬರು ಮಹಿಳೆಯರಿದ್ದಾರೆ.

ಅಮೇಥಿ ನೆಹರು-ಗಾಂಧಿ ಮನೆತನದ ರಾಜಕೀಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ.

Comments are closed.