ಅಂತರಾಷ್ಟ್ರೀಯ

ಈ ದ್ವೀಪದ ಜನ ದಿನಕ್ಕೆ 1620 ಸಮುದ್ರ ಪಕ್ಷಿಗಳನ್ನು ಭಕ್ಷಿಸುತ್ತಿದ್ದರು!

Pinterest LinkedIn Tumblr

st_kilda_island_
ಏನೆಲ್ಲ ಬದಲಾವಣೆ ಆದರೂ ಹೊಸಬರಿಗೆ ಹಳಬರ ಜೀವನದ ಕುರಿತ ಆಸಕ್ತಿಗಳಿಗೆ ಮಾತ್ರ ಈಗಲೂ ಕೊಂಚವೂ ಕುಂದು ಉಂಟಾಗಿಲ್ಲ ಎಂಬ ಮಾತಿಗೆ ಮತ್ತೊಮ್ಮೆ ಪುರಾವೆ ದೊರೆತಿದೆ. 1764ರಲ್ಲಿ ನಡೆದ ಜನಸಂಖ್ಯಾ ಗಣತಿಯೊಂದರ ಅಂಕಿ-ಅಂಶಗಳು ಈಗ ಸುದ್ದಿ ಆಗುತ್ತಿರುವುದು ಮತ್ತು ಚರ್ಚೆಗೆ ಆಹಾರ ಆಗಿರುವುದು ಇದೇ ಕಾರಣಕ್ಕೆ. ಹೌದು, 1764ರಲ್ಲಿ ಸ್ಕಾಟ್ಲೆಂಡ್‌ ಬಳಿಯ ದ್ವೀಪ ಸಮೂಹದಲ್ಲಿ ನಡೆದ ಗಣತಿಯ­ಲ್ಲಿನ ಕೆಲವು ವಿಶೇಷ ಸಂಗತಿಗಳನ್ನು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಅಂಕಿ-ಅಂಶ ಸಂಗ್ರಹಾಲಯ ಬೆಳಕಿಗೆ ತಂದಿದೆ. ಈ ಅಂಕಿ-ಅಂಶಗಳ ಪೈಕಿ, ಸೇಂಟ್‌ ಕಿಲ್ಡಾ ದ್ವೀಪದ ಜನರು ದಿನವೊಂದಕ್ಕೆ ಬರೋಬ್ಬರಿ 1,600ಕ್ಕೂ ಹೆಚ್ಚು ಸಮುದ್ರ ಪಕ್ಷಿಗಳನ್ನು ಆಹಾರವನ್ನಾಗಿ ಬಳಸುತ್ತಿದ್ದರು ಎಂಬುದು ದೊಡ್ಡ ಸುದ್ದಿಯಾಗಿದೆ.
ಇನ್ನು, ಇದೇ ದ್ವೀಪಸಮೂಹದ ಪ್ರಮುಖ ದ್ವೀಪವಾದ ಹಿರ್ತಾ ನಾನಾ ಕಾರಣಕ್ಕೆ ಅಧ್ಯಯನಕಾರರ ಗಮನ ಸೆಳೆದಿದೆ. ಈ ದ್ವೀಪದಲ್ಲಿ ಒಟ್ಟು 38 ಮಂದಿ ಪುರುಷರು ಮತ್ತು 52 ಮಂದಿ ಮಹಿಳೆಯರನ್ನು ಒಳಗೊಂಡ 19 ಕುಟುಂಬಗಳು ಇದ್ದವಂತೆ. ಇವರಲ್ಲಿ ಪ್ರತಿಯೊಬ್ಬರೂ ದಿನವೊಂದಕ್ಕೆ ಒಟ್ಟು 18 ಕಾಡುಕೋಳಿ ಮತ್ತು 36 ಕಾಡುಕೋಳಿ ಮೊಟ್ಟೆಗಳನ್ನು ತಿನ್ನುತ್ತಿದ್ದರು. ಅಂದರೆ, ಇಡೀ ದ್ವೀಪದ ಜನರು ಪ್ರತಿ ದಿನ ತಿನ್ನುತ್ತಿದ್ದದ್ದು ಬರೋಬ್ಬರಿ 3,240 ಮೊಟ್ಟೆಮತ್ತು 1,620 ಪಕ್ಷಿಗಳನ್ನು!
ಸ್ಕಾಟ್ಲೆಂಡ್‌ ದ್ವೀಪಸಮೂಹದ ಜನಜೀವನದ ಬಗ್ಗೆ ಅಧ್ಯಯನ ಮಾಡುವವರಿಗೆ ಈ ಎಲ್ಲ ಅಂಕಿ-ಅಂಶಗಳಿರುವ ದಾಖಲೆಗಳು ವರವಾಗಿ ಪರಿಣಮಿಸಿವೆ ಎನ್ನಲಾಗಿದೆ.

Comments are closed.