ಅಂತರಾಷ್ಟ್ರೀಯ

ಬೆಕ್ಕಿಗೆ ಮನೆ ಕಟ್ಟಿದ ಬಾಲಕ

Pinterest LinkedIn Tumblr

houseಮನೆಯಲ್ಲಿ ನಾಯಿ ಸಾಕಿದ್ದವರು ಅದಕ್ಕೊಂದು ಪುಟ್ಟ ಗೂಡು ಅಥವಾ ಮನೆ ನಿರ್ವಿುಸಿರುತ್ತಾರೆ. ಆದರೆ, ಅಮೆರಿಕದ ಹುಡುಗ ಸ್ಯಾಮ್ ತಾನು ಸಾಕಿದ ಮುದ್ದಿನ ಬೆಕ್ಕಿಗಾಗಿ ವಿಶಿಷ್ಟವಾದ ಮನೆ ನಿರ್ವಿುಸುವ ಮೂಲಕ ಗಮನ ಸೆಳೆದಿದ್ದಾನೆ.

ಕಾರ್ಡ್ಬೋರ್ಡ್ನಲ್ಲಿ ನಿರ್ವಿುಸಿಲಾಗಿರುವ ಈ ಮನೆ ಡ್ರ್ಯಾಗನ್ ಮಾದರಿಯಲ್ಲಿದೆ. ಇದನ್ನು ಆತನೇ ನಿರ್ವಿುಸಿದ್ದಾಗಿ ವೆಬ್ಸೈಟ್ನಲ್ಲಿ ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋ, ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಹತ್ತಾರು ರಾಷ್ಟ್ರಗಳ ಲಕ್ಷಕ್ಕೂ ಹೆಚ್ಚು ಜನರು ಈ ಮನೆಯನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ.

ಕಾರ್ಡ್ಬೋರ್ಡ್ನಿಂದ ವಸ್ತಗಳನ್ನು ರಚಿಸುವುದು ನನಗೆ ತುಂಬ ಇಷ್ಟದ ಕೆಲಸ. ಈಗಾಗಲೇ ಸಾಕಷ್ಟು ಮಾದರಿಯನ್ನು ರಚಿಸಿದ್ದೇನೆ. ಇದೇ ಮೊದಲ ಬಾರಿಗೆ ಬೆಕ್ಕಿಗೆ ಮನೆ ಕಟ್ಟಿಕೊಟ್ಟಿದ್ದೇನೆ. ಬೆಕ್ಕಿಗೂ ಇದು ತುಂಬ ಇಷ್ಟವಾಗಿದೆ. ಬೆಕ್ಕೆಂದರೆ ನನಗೂ ಬಲು ಇಷ್ಟ ಎಂದು ಸ್ಯಾಮ್ ತನ್ನದೇ ವೆಬ್ಸೈಟ್ನಲ್ಲಿ ಬರೆದುಕೊಂಡಿದ್ದಾನೆ.

ಕಾರ್ಡ್ ಬೋರ್ಡ್ನ ಈ ಮನೆ ಬಹುಮಹಡಿ ಹೊಂದಿದೆ. ಬೆಕ್ಕು ಮನೆಯ ಒಳಗೆ ಒಡಾಡಬಹುದು. ಇದರ ಒಳಗೆ ಆಟಿಕೆಗಳನ್ನೂ ಇಡಲಾಗಿದೆಯಂತೆ. ಕೊನೆಯ ಮಹಡಿಯಲ್ಲಿ ಬೆಕ್ಕಿಗೆ ಬಾಲ್ಕನಿಯನ್ನೂ ನಿರ್ವಿುಸಲಾಗಿದೆ.

ಬೆಕ್ಕು ಕೂಡ ಈ ಮನೆಯಲ್ಲಿ ಸಂತಸದಿಂದ ಓಡಾಡಿಕೊಂಡಿದೆ. ದಿನದ ಸಾಕಷ್ಟು ಸಮಯವನ್ನು ಇಲ್ಲಿ ಕಳೆಯುತ್ತಿದೆ. ಮುಂದೆ ಇದೇ ರೀತಿಯ ಇನ್ನಷ್ಟು ಹೊಸ ಪ್ರಯೋಗಗಳನ್ನು ನಡೆಸಲು ಉತ್ಸುಕನಾಗಿರುವುದಾಗಿ ಸ್ಯಾಮ್ ಹೇಳಿಕೊಂಡಿದ್ದಾನೆ.

Comments are closed.