ರಾಷ್ಟ್ರೀಯ

ಪ್ಲಾಸ್ಟಿಕ್‌ ನೋಟು ಮುದ್ರಣಕ್ಕೆ ಸಿದ್ಧತೆ: ಕೇಂದ್ರ

Pinterest LinkedIn Tumblr

10-rsನವದೆಹಲಿ: ಪ್ಲಾಸ್ಟಿಕ್‌ ಕರೆನ್ಸಿ ನೋಟುಗಳನ್ನು ಮುದ್ರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಸಂಸತ್‌ನಲ್ಲಿ ತಿಳಿಸಿದೆ. ಪ್ಲಾಸ್ಟಿಕ್‌ ಅಥವಾ ಪಾಲಿಮರ್‌ ತಲಾಧಾರ ಬಳಸಿ ಕರೆನ್ಸಿ ನೋಟು ಮುದ್ರಿಸಲಾಗುತ್ತದೆ. ಈಗಾಗಲೇ ಮುದ್ರಣಕ್ಕೆ ಅಗತ್ಯ ವಸ್ತುಗಳ ಸಂಗ್ರಹ ಕಾರ್ಯ ನಡೆಯುತ್ತಿದೆ ಎಂದು ಹಣಕಾಸು ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ರೂ. 10 ಮುಖಬೆಲೆಯ 100 ಕೋಟಿ ಪ್ಲಾಸ್ಟಿಕ್‌ ನೋಟುಗಳನ್ನು ಮುದ್ರಿಸಿ ಪ್ರಾಯೋಗಿಕ ಚಲಾವಣೆ ನಡೆಸಲಾಗುವುದು ಎಂದು 2014ರ ಫೆಬ್ರವರಿಯಲ್ಲಿ ಸರ್ಕಾರ ಸಂಸತ್ತಿಗೆ ತಿಳಿಸಿತ್ತು.

ಕೊಚ್ಚಿ, ಮೈಸೂರು, ಶಿಮ್ಲಾ, ಜೈಪುರ ಹಾಗೂ ಭುವನೇಶ್ವರ ಸೇರಿದಂತೆ ಐದು ನಗರಗಳಲ್ಲಿ ಪ್ರಾಯೋಗಿಕ ಚಲಾವಣೆ ಬಳಿಕ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟು ಬಿಡುಗಡೆ ಮಾಡಲು ನಿರ್ಧರಿಸಿದೆ.

ಕಾಗದದ ಬದಲು ಬಳಸಲಾಗುವ ಪ್ಲಾಸ್ಟಿಕ್‌ ನೋಟುಗಳು ಕನಿಷ್ಠ 5 ವರ್ಷ ಬಾಳಿಕೆ ಬರುತ್ತವೆ ಹಾಗೂ ನಕಲಿ ಮಾಡಲು ಕಷ್ಟಕರವಾಗಲಿದೆ. ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಈ ರೀತಿಯ ಪ್ಲಾಸ್ಟಿಕ್‌ ನೋಟುಗಳನ್ನು ಮುದ್ರಿಸಲಾಗಿತ್ತು.

Comments are closed.