ಕರಾವಳಿ

ದೂರುಗಳು ಬರದಂತೆ ವಿಶ್ವಾಸದಿಂದ ಸೇವೆ ಮಾಡಿ : ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ಸಂಯುಕ್ತ ಘಟಕ ಉದ್ಘಾಟಿಸಿ ಸಚಿವ ರಮೇಶ್ ಕುಮಾರ್

Pinterest LinkedIn Tumblr

wenlock_ayus_photo_5

ಮಂಗಳೂರು, ಡಿಸೆಂಬರ್.9: ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ಸಂಯುಕ್ತ ಘಟಕವಾದ ‘ವೆನ್ಲಾಕ್ ಆಯಂಬುಲೆನ್ಸ್ ರೆಸ್ಪಾಂಟ್ ಸರ್ವಿಸ್, ಜನಸಂಜೀವಿನಿ ಔಷಧಿ ಮಳಿಗೆ, ಸಂಯುಕ್ತ ಆಯುಷ್, ವಿಶೇಷ ಚಿಕಿತ್ಸಾ ಘಟಕ, ಹೊರರೋಗಿ ಕ್ಷ-ಕಿರಣ ವಿಭಾಗ, ನವೀಕೃತ ಸೆಲ್ವಾರ್ಡ್’ನ್ನು ಶುಕ್ರವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಅವರು ಉದ್ಘಾಟಿಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದದ್ದು, ಸಾರ್ವಜನಿಕರಿಂದ ದೂರುಗಳು ಬರದಂತೆ ಪ್ರೀತಿ, ವಿಶ್ವಾಸದಿಂದ ಸೇವೆಗೈಯುವಂತೆ ಕರೆ ನೀಡಿದರು. ಸರಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದ ಹಿಡಿದು ವೈದ್ಯರು, ಅಧಿಕಾರಿಗಳು ಹಸನ್ಮುಖಿಗಳಾಗಿ ಸೇವೆ ಸಲ್ಲಿಸಬೇಕು. ಇದರಿಂದ ರೋಗಿಯ ಅರ್ಧಕ್ಕರ್ಧ ರೋಗ ಗುಣಮುಖವಾದಂತೆ.

ಸಹನೆಯ ಪ್ರತೀಕವಾದ ಮದರ್ ತೆರೆಸಾ ವೈದ್ಯಕೀಯ ಕ್ಷೇತ್ರದ ಪ್ರತಿಯೊಬ್ಬರಿಗೂ ಮಾದರಿಯಾಗೇಕು. ಸರಕಾರಿ ಆಸ್ಪತ್ರೆಯಲ್ಲಿ ಲಂಚಕ್ಕೆ ಪೀಡಿಸಲಾಗುತ್ತದೆ. ಸಮರ್ಪಕ ಸೇವೆ ನೀಡಲಾಗುತ್ತಿಲ್ಲ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತದೆ. ಇಲ್ಲಿ ಅಂತಹ ಸೇವೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗುವ ಶ್ರೀಮಂತರು ಕೂಡ ಮುಂದೊಂದು ದಿನ ಸರಕಾರಿ ಆಸ್ಪತ್ರೆಗೆ ಬರುವಂತಹ ವಾತಾವರಣವನ್ನು ಎಲ್ಲ ಸಿಬ್ಬಂದಿ-ಅಧಿಕಾರಿ ವರ್ಗ ಸೃಷ್ಟಿಸಬೇಕು ಎಂದವರು ಹೇಳಿದರು.

wenlock_ayus_photo_1 wenlock_ayus_photo_2 wenlock_ayus_photo_3 wenlock_ayus_photo_4 wenlock_ayus_photo_6 wenlock_ayus_photo_7 wenlock_ayus_photo_8 wenlock_ayus_photo_9 wenlock_ayus_photo_10

ಬಡ ರೋಗಿಗಳ ಹಿತದೃಷ್ಟಿಯಿಂದ ಕಾರ್ಯಾಚರಿಸುವ ಸರಕಾರಿ ಆಸ್ಪತ್ರೆಗಳ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸಮಸ್ಯೆಯಾಗಲಿದೆ.

ವೈದ್ಯಕೀಯ ಕ್ಷೇತ್ರವು ಲಾಭದ ನಿರೀಕ್ಷೆಯ ಕ್ಷೇತ್ರವಲ್ಲ. ಇದು ಸೇವಾಮನೋಭಾವದ ಕ್ಷೇತ್ರವಾಗಿದೆ. ಸರಕಾರಿ ಆಸ್ಪತ್ರೆಗಳ ಮತ್ತಷ್ಟು ಸೇವೆಯನ್ನು ಜನರಿಗೆ ನೀಡಲು ಇಲಾಖೆ ಕಟಿಬದ್ಧವಾಗಿದೆ. ಹಾಗಾಗಿ ‘ಡಿ’ ಗ್ರೂಪ್ ನೌಕರರಿಂದ ಹಿಡಿದು ವೈದ್ಯರು, ಅಧಿಕಾರಿಗಳು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಸಹಕರಿಸಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಲಾದ ಆಯುಷ್ ಪದ್ಧತಿಗಳ ವಿವಿಧ ಸೇವೆಗಳನ್ನು ಕಂಡು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

wenlock_ayus_photo_11 wenlock_ayus_photo_12 wenlock_ayus_photo_13 wenlock_ayus_photo_14 wenlock_ayus_photo_15 wenlock_ayus_photo_16 wenlock_ayus_photo_17 ayush_wenlock_start_1-1 ayush_wenlock_start_1-2 ayush_wenlock_start_1-3 ayush_wenlock_start_1-4 ayush_wenlock_start_1-5 ayush_wenlock_start_1-6 ayush_wenlock_start_1-7 ayush_wenlock_start_1-8 ayush_wenlock_start_1-9 ayush_wenlock_start_1-10 ayush_wenlock_start_1-11

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಿರ್ದೇಶಕ ಡಾ.ಪಿ.ಎಲ್. ನಟರಾಜ್, ಡಿಎಚ್‌ಒ ಡಾ.ಎಂ. ರಾಮಕೃಷ್ಣ ರಾವ್, ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.

ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರಾಜೇಶ್ವರಿ ದೇವಿ ಎಚ್.ಆರ್. ಸ್ವಾಗತಿಸಿದರು. ಅಯುಷ್ ಇಲಾಖೆಯ ಹಿರಿಯ ಆಯುರ್ವೇದ ವೈದ್ಯ ಡಾ.ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.

Comments are closed.