ಉಡುಪಿ: ತನ್ನ ಜೊತೆ ಒಂದು ವರ್ಷದ ಪ್ರೀತಿ ಪ್ರೇಮ ಪ್ರಣಯದಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ ಯುವಕ ಲವ್ ಸೆಕ್ಸ್ ದೋಖಾ ಮಾಡಲು ಹೊರಟ ಬಗ್ಗೆ ಆತನ ಪ್ರೇಯಸಿ ಈಗ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು ನಂಬಿಕೆ ದ್ರೋಹ ಮಾಡಿದ ಯುವಕನ ಮನೆಯೆದುರು ಕುಳಿತು ಸಾಂಕೇತಿಕ ಧರಣಿ ನಡೆಸಿದ್ದಾಳೆ. ಕಳೆದ ಒಂದು ವರ್ಷದಿಂದ ಸಚಿನ್ ಎಂಬ ಯುವಕನ ಜೊತೆ ಪ್ರೇಮಾಂಕುರವಾಗಿದ್ದು ಈಗ ನಂಬಿಸಿ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿ ಪ್ರಿಯತಮೆ ತನ್ನ ಪ್ರಿಯತಮನ ಮನೆ ಮುಂದೆ ಧರಣಿ ನಡೆಸಿದ ಘಟನೆ ಶುಕ್ರವಾರ ಉಡುಪಿ ತಾಲೂಕಿನ ಸಾಸ್ತಾನ ಸಮೀಪದ ಪಾಂಡೇಶ್ವರ ಸಮೀಪ ಯಡಬೆಟ್ಟು ಎಂಬಲ್ಲಿ ನಡೆದಿದೆ.
ಕೈಕೊಡಲು ಹೊರಟ ಪ್ರಿಯಕರ..!
ವರ್ಷಗಳಿಂದೀಚೆಗೆ ಸಚಿನ್ ಜೊತೆ ನನ್ನ ಸಂಪರ್ಕವಿದ್ದು ಪ್ರತಿ ದಿನ ಮೊಬೈಲ್ ಕರೆ ಮಾಡುವುದು ಮಾತ್ರವಲ್ಲದೇ ಪ್ರೀತಿ ಬಗ್ಗೆ ಮೇಸೆಜ್ಗಳನ್ನು ಮಾಡುತ್ತಿದ್ದ. ಅಲ್ಲದೇ ಇದೇ ಆ.4ರಂದು ಮಣಿಪಾಲದ ಲಾಡ್ಜಿಗೆ ಕರೆದುಕೊಂಡು ಹೋಗಿ ಅಲ್ಲಿ ಇಷ್ಟವಿಲ್ಲದೆಯೂ ನನ್ನ ಜೊತೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನನ್ನ ಯಾಮಾರಿಸಿದ ಈತ ಈಗ ನನ್ನಿಂದ ದೂರವಾಗಲು ಯತ್ನಿಸಿದ್ದ. ಈ ಬಗ್ಗೆ ನನಗಾದ ಅನ್ಯಾಯದ ವಿರುದ್ಧ ನಾನು ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಅಲ್ಲಿನ ಪೊಲೀಸರು ರಾಜಿ ನಡೆಸಿ ಮದುವೆ ಮಾಡಿಸುವುದಾಗಿ ತಿಳಿಸಿದ್ದರೂ ಕೂಡ ಅಕ್ಟೋಬರ್ 12ರಂದು ನನ್ನ ಪ್ರಿಯಕರನಾದ ಸಚಿನ್ ಆತನ ಮನೆಯಿಂದ ಪರಾರಿಯಾಗಿದ್ದಾನೆ. ಈ ಕುರಿತು ಪುನಃ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿ, ಸಂಬಂದಪಟ್ಟ ಪೊಲೀಸ ಅಧಿಕಾರಿಗಳಿಗೆ ಕಷ್ಟಗಳನ್ನು ಹೇಳಿಕೊಂಡರೂ ಕೂಡ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ನನ್ನನ್ನು ಪ್ರೀತಿ ಹೆಸರಲ್ಲಿ ವಂಚಿಸಿದ ಸಚಿನ್ ಬಂದು ನನಗೆ ನ್ಯಾಯ ಒದಗಿಸುವ ತನಕ ಹೋರಾಟ ನಡೆಸುತ್ತೇನೆಂದು ಮಾಧ್ಯಮದ ಎದುರು ಹೇಳಿದ ಯುವತಿ ಮಧ್ಯಾಹ್ನದ ಬಳಿಕ ಆತನ ಮನೆಯಿಂದ ವಾಪಾಸ್ಸಾಗಿದ್ದಾಳೆ.
ಸಚಿನ್ ಮನೆಯವರು ಏನು ಹೇಳ್ತಾರೇ..?
ಈ ಬಗ್ಗೆ ಸಚಿನ್ ಮನೆಯವರು ನಮಗೇನು ಮೊದಲಿಗೆ ತಿಳಿದಿರಲಿಲ್ಲ, ಯುವತಿ ಪೊಲೀಸ್ ಠಾಣೆಗೆ ದೂರು ನೀಡಿ ನಮ್ಮನ್ನು ಅಲ್ಲಿಗೆ ಕರೆಸಿದ ಬಳಿಕವೇ ಇದೆಲ್ಲಾ ತಿಳಿದಿದೆ. ಇನ್ನೂ ಸಚಿನ್ಗೆ ಮದುವೆಯಾಗುವ ವರ್ಷವಾಗಿಲ್ಲ. ಆತನಿಗಿನ್ನೂ 21 ವರ್ಷವಾಗಿದೆ. ಇವರಿಬ್ಬರ ಪ್ರೀತಿ ಬಗ್ಗೆ ನಾವು ಕೇಳಿದರೇ ಆತ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಅಲ್ಲದೇ ಅಕ್ಟೋಬರ್ 12ರಂದು ರಾತ್ರಿ ಮನೆಯಲ್ಲಿ ಮಲಗಿದ್ದವನು ಮನೆಯಿಂದ ಎಲ್ಲಿಗೋ ತೆರಳಿದ್ದಾನೆ. ಈ ಕುರಿತು ಪೊಲೀಸ್ ಠಾಣೆಗೂ ಕೂಡ ತಿಳಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
Comments are closed.