ಸ್ಪೇನ್’ನ ಹಳ್ಳಿಯೊಂದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದು, ಇದೀಗ ವ್ಯಾಪಕ ಸುದ್ದಿಯಲ್ಲಿದೆ. ಈ ಹಳ್ಳಿಯ ಜನ ಲಾಟರಿಯಿಂದ ಕೋಟ್ಯಾಧಿಪತಿಗಳಾಗಿಲ್ಲ. ದಾನಿಯೊಬ್ಬರು ನೀಡಿದ ಹಣದಿಂದ ಇಡೀ ಹಳ್ಳಿಯೇ ಕೋಟ್ಯಾಧಿಪತಿಯಾಗಿದೆ. ಇದು ನಂಬಲು ಸಾಧ್ಯ ಇಲ್ಲದಿದ್ದರೂ ನಂಬಲೇಬೇಕು. ಈ ಕುರಿತು ಮಾಧ್ಯಮವೊಂದು ಬೆಳಕು ಚೆಲ್ಲಿದೆ.
80 ಕುಟುಂಬಗಳಿರುವ ಸಿರಿಜೆಲ್ಸ್ ಡೆಲ್ ಕೊಂದಂಡೋ ಎಂಬ ಸಣ್ಣ ಹಳ್ಳಿಯೇ ಈಗ ಕೋಟ್ಯಾಧಿಪತಿಗಳ ಸ್ಥಾನ ಅಲಂಕರಿಸಿರುದು. ಈ ಹಳ್ಳಿಯನ್ನು ಜಗತ್ತಿನಾದ್ಯಂತ ಜನ ನಿಬ್ಬೆರಗಾಗುವಂತೆ ಮಾಡಿದ ಮಹಾನ್ ವ್ಯಕ್ತಿ, ದಾನಿ ಅಂಟೋನಿನೊ ಫೆರ್ನಾಂಡಿಸ್.
ಅಂಟೋನಿನೊ ಫೆರ್ನಾಂಡಿಸ್ ‘ಕೊರೊನ ಬಿಯರ್’ನ ಸಂಸ್ಥಾಪಕ. ಶ್ರೀಮಂತನಾಗಿದ್ದ ಈತ 1917 ರಲ್ಲಿ ಸ್ಪೇನಿನ ಸಿರಿಜೆಲ್ಸ್ ಡೆಲ್ ಕೊಂದಂಡೋದಲ್ಲಿ ಹುಟ್ಟಿದ್ದು, ಇದೇ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದ್ದ.
ಸಾವನ್ನಪ್ಪುವ ಮುಂಚೆ ತನ್ನಲ್ಲಿದ್ದ 1,400 ಕೋಟಿ ರೂ.ಹಣ ಹಾಗು ಆಸ್ತಿಯನ್ನು ಸಿರಿಜೆಲ್ಸ್ ಡೆಲ್ ಕೊಂದಂಡೋದ ಹಳ್ಳಿಯ ಜನರ ಹೆಸರಿಗೆ ಅಂಟೋನಿನೊ ಫೆರ್ನಾಂಡಿಸ್ ಬರೆದಿಟ್ಟಿದ್ದ. ಅದರಂತೆ 80 ಕುಟುಂಬವಿರುವ ಈ ಹಳ್ಳಿಯ ಜನರಿಗೆ ತಲಾ 18 ಕೋಟಿ ರು. ಪಾಲಾಗಿದೆ. ಆದರೆ ಈ ಹಳ್ಳಿ ಜನ ಈ ವಿಷಯ ಕೇಳಿ ಮೊದಲು ನಂಬಲಿಲ್ಲ. ಇದು ವಾಸ್ತವ ಸಂಗತಿ ಎಂದು ಗೊತ್ತಾಗುತ್ತಿದ್ದಂತೆ ಜನರ ಸಂತೋಷಕ್ಕೆ ಪಾರೇ ಇರಲಿಲ್ಲ. ಇದರಿಂದ ಸ್ಪೇನ್ ಶ್ರೀಮಂತ ಹಳ್ಳಿಗಳ ಪಟ್ಟಿಯಲ್ಲಿ ಈ ಹಳ್ಳಿಯು ಸೇರ್ಪಡೆಯಾಗಿದೆ.
ಆಗಾಗ್ಗೆ ಈ ಹಳ್ಳಿಗೆ ಬರುತ್ತಿದ್ದ ಅಂಟೋನಿನೊ ಫೆರ್ನಾಂಡಿಸ್ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತವನ್ನು ನೀಡುತ್ತಾ ಬಂದಿದ್ದ. ಜೊತೆ ಬಡತನದಲ್ಲಿದ್ದ ಇಲ್ಲಿನ ಜನರಿಗೆ ವಿದ್ಯಾಭ್ಯಾಸಕ್ಕಾಗಿ ಹಣವನ್ನು ನೀಡಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಈ ಹಳ್ಳಿಯ ಜನರ ಪ್ರೀತಿಗೆ ಪ್ರತಿಯಾಗಿ ಹಣವನ್ನೆಲ್ಲ ದಾನ ಮಾಡಿ ದಾನ ಶೂರ ಕರ್ಣನೆನಿಸಿಕೊಂಡಿದ್ದಾನೆ ಅಂಟೋನಿನೊ. ಇವನ ದಾನವನ್ನ ಇಡೀ ಜಗತ್ತೇ ಕೊಂಡಾಡಿದೆ.
Comments are closed.