ಅಂತರಾಷ್ಟ್ರೀಯ

ಪಾಕ್ ನಲ್ಲಿ ಭಾರತದ ಹತ್ತಿ ನಿಷೇಧ

Pinterest LinkedIn Tumblr

cottonಇಸ್ಲಮಾಬಾದ್: ಗಡಿಯಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿರುವ ಕಾರಣ, ಭಾರತದ ಹತ್ತಿ ಸೇರಿದಂತೆ ಕೃಷಿ ಉತ್ಪನ್ನಗಳ ಆಮದನ್ನು ಪಾಕಿಸ್ತಾನ ನಿಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತದಿಂದ ಬರುವ ಕೃಷಿ ಉತ್ಪನ್ನಗಳು ವಾಘಾ ಗಡಿ ದಾಟಿ ಕರಾಚಿ ಬಂದರಿಗೆ ಬರಬೇಕು. ಅನಂತರ ಅಲ್ಲಿಂದ ಅನುಮತಿ ಪಡೆದು ಮುಂದಿನ ಸ್ಥಳಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಡಾನ್ ವರದಿ ಮಾಡಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಲಿಖಿತ ಆದೇಶವಿಲ್ಲದೆ ಭಾರತದಿಂದ ಕೃಷಿ ಪದಾರ್ಥಗಳ ಆಮದು ಸಾಧ್ಯವಿಲ್ಲ, ಹೀಗಾಗಿ, ಭಾರತದ ಕೃಷಿ ಉತ್ಪನ್ನಗಳ ಆಮದನ್ನು ನಿಲ್ಲಿಸಲಾಗಿದೆ ಎಂದು ಸಸ್ಯ ಸಂರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.