ರಾಷ್ಟ್ರೀಯ

ಮಂಗಳಮುಖಿಯರಿಗೆ ಮೂರನೇ ಲಿಂಗವಾಗಿ ಐ.ಆರ್.ಸಿ.ಟಿ.ಸಿ ಅರ್ಜಿಯಲ್ಲಿ ಸೇರ್ಪಡೆ

Pinterest LinkedIn Tumblr

third-gender
ದೆಹಲಿ: ಭಾರತೀಯ ರೈಲ್ವೆ ಮತ್ತು ಐ.ಆರ್.ಸಿ.ಟಿ.ಸಿಯು ಮುಂಗಡ ಟಿಕೆಟ್ ಹಾಗೂ ರದ್ದುಗೊಳಿಸುವ ಅರ್ಜಿಯಲ್ಲಿ ಪುರುಷ ಹಾಗೂ ಮಹಿಳೆಯೊಂದಿಗೆ ತೃತೀಯ ಲಿಂಗಿಯರನ್ನು ಸೇರ್ಪಡೆಗೊಳಿಸಿದೆ.

ದೆಹಲಿ ಮೂಲದ ವಕೀಲರೊಬ್ಬರು ದೆಹಲಿ ಹೈ.ಕೋ ನಲ್ಲಿ ಕಳೆದ ಫೆಬ್ರವರಿಯಲ್ಲಿ ದಾವೆ ಹೂಡಿದ್ದರು. ಈ ನಿಟ್ಟಿನಲ್ಲಿ, ಕೋರ್ಟ್ ಸಹ ರೈಲ್ವೆ ಇಲಾಖೆಯಲ್ಲೂ ಅರ್ಜಿ ಕುರಿತಂತೆ ಮಾತುಕತೆ ನಡೆಸಲು ತಿಳಿಸಿತ್ತು.

ಏಪ್ರಿಲ್ 2014 ರ ಅಪೇಕ್ಸ್ ನ್ಯಾಯಾಲಯದ ನಿರ್ದೇಶನದ ಮೇರೆಗೆ, ಸಚಿವಾಲಯವು, ಹಕ್ಕು ರಕ್ಷಣೆಯಡಿಯಲ್ಲಿ ಹಿಜ್ಡಾಗಳಿಗೆ ತೃತೀಯ ಲಿಂಗಿಗಳು ಎಂಬ ಮಾನ್ಯತೆ ನೀಡಲಾಗುವುದು ಎಂದು ಹೇಳಿತ್ತು. ಸಂವಿಧಾನದ ಭಾಗ-3 ರ ಅಡಿಯಲ್ಲಿ ಹಕ್ಕುಗಳ ರಕ್ಷಣೆಗಾಗಿ, ಹಿಜಡಾಗಳಿಗೆ ತೃತೀಯ ಲಿಂಗಿ ಮಾನ್ಯತೆ ನೀಡಲು ತಮ್ಮ ಆದೇಶದಲ್ಲಿ ನಿರ್ದೇಶನ ನೀಡಿದೆ.

ಈ ಪ್ರಕಾರ, ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ರದ್ದುಗೊಳಿಸುವ ಅರ್ಜಿಯಲ್ಲಿ ತೃತೀಯ ಲಿಂಗಿ ಸೇರ್ಪಡೆ ಮತ್ತು
ಪೂರ್ಣ ದರದ ಟಿಕೆಟ್ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಕೀಲ ಜಮ್ಶೆಡ್ ಅನ್ಸಾರಿ ಅವರು, ‘ತೃತೀಯ ಲಿಂಗಿ’ ಗಳನ್ನು ಅರ್ಜಿಗಳಲ್ಲಿ ಲಿಂಗಗಳ ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ಐ.ಆರ್.ಸಿ.ಟಿ.ಸಿ ನ ಪರಿಚ್ಛೇದ 14,15,19 ಮತ್ತು 21 ರ ನಿಯಮ ಉಲ್ಲಂಘನೆಗಾಗಿ ಹೈ.ಕೋ ನಲ್ಲಿ ದೂರು ಸಲ್ಲಿಸಿದ್ದರು.

ಅರ್ಜಿಗಳಲ್ಲಿ ಮಾತ್ರವಲ್ಲದೆ, ರೈಲುಗಳಲ್ಲಿ ತೃತೀಯ ಲಿಂಗಿಗಳ ಸುರಕ್ಷತಾ ದೃಷ್ಟಿಯಿಂದ ವಿಶೇಷ ಬೋಗಿ ಹಾಗೂ ಸೀಟುಗಳನ್ನು
ಒದಗಿಸುವ ಕುರಿತು ಬೇಡಿಕೆ ಸಲ್ಲಿಸಿದ್ದರು. ಮುಖ್ಯ ನ್ಯಾಯಾಧೀಶ ಜಿ.ರೋಹಿಣಿ ನೇತ್ಋತ್ದ ಪೀಠವು ಅರ್ಜಿ ವಿಚಾರಣೆಗೆ ನಡೆಸಿತ್ತು.

Comments are closed.