ರಾಷ್ಟ್ರೀಯ

ಅನಕ್ಷರಸ್ಥ ರೈತರಿಂದ ಡಿಜಿಟಲ್ ಬ್ಯಾಂಕಿಂಗ್ ಹೇಗೆ?

Pinterest LinkedIn Tumblr

monishaನವದೆಹಲಿ: ಓದಲು ಅಥವಾ ಬರೆಯಲು ಬಾರದ ಲಕ್ಷಾಂತರ ಮಂದಿ ರೈತರು ಮತ್ತು ಕಾರ್ಮಿಕರನ್ನು ಇ-ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮಾಡುವಂತೆ ಹೇಗೆ ಒತ್ತಾಯಿಸುವಿರಿ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

‘ಇ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ ಅತ್ಯುತ್ತಮ. ಆದರೆ ಓದಲು ಮತ್ತು ಬರೆಯಲು ಬಾರದ ಲಕ್ಷಾಂತರ ಮಂದಿ ರೈತರು, ಕಾರ್ಮಿಕರು, ವ್ಯಾಪಾರಿಗಳನ್ನು ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮಾಡುವಂತೆ ನೀವು ಹೇಗೆ ಒತ್ತಾಯಿಸುವಿರಿ?’ ಎಂದು ಟ್ವಿಟ್ಟರ್ ಸಂದೇಶ ಒಂದರಲ್ಲಿ ಪ್ರಧಾನಿಯನ್ನು ಪ್ರಶ್ನಿಸಿರುವ ಸಿಸೋಡಿಯಾ, ನಿಮ್ಮ ಸಂಸತ್ ಸದಸ್ಯರು, ಕಾರ್ಯದರ್ಶಿಗಳಲ್ಲಿ ಎಷ್ಟು ಜನ ನಿತ್ಯ ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದಾರೆ ಕೇಳಿ ನೋಡಿ ಎಂದು ಸೂಚಿಸಿದ್ದಾರೆ.

’ಮೋದಿಜಿ! ಪ್ರತಿದಿನದ ಬದುಕಿನಲ್ಲಿ ನಿಮ್ಮ ಸರ್ಕಾರದ ಕನಿಷ್ಠ 100 ಕಾರ್ಯದರ್ಶಿಗಳು ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದಾರೆಯೇ? ಇಲ್ಲವಾದಲ್ಲಿ ಲಕ್ಷಾಂತರ ಮಂದಿ ರೈತರು, ಕಾರ್ಮಿಕರು, ವರ್ತಕರನ್ನು ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುವಂತೆ ಹೇಗೆ ಒತ್ತಾಯಿಸುವಿರಿ?’ ಎಂದು ಸಿಸೋಟಿಯಾ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ನಗದು ರಹಿತ ವಹಿವಾಟಿಗಾಗಿ ಇ-ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವಂತೆ ಪ್ರಧಾನಿ ಮೋದಿ ಅವರು ಭಾನುವಾರ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆಗ್ರಹಿಸಿದ್ದನ್ನು ಅನುಸರಿಸಿ ಸಿಸೋಡಿಯಾ ಈ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

Comments are closed.