ಅಂತರಾಷ್ಟ್ರೀಯ

ಅತಿಥಿಗಳ ಜೋರು ಗದ್ದಲ: ಗುಂಡು ಹಾರಿಸಿದ ಮಹಿಳೆ

Pinterest LinkedIn Tumblr

pistool-in-kapselಅತಿಥಿಗಳು ಜೋರಾಗಿ ಗದ್ದಲ ಮಾಡುತ್ತಿದ್ದಾರೆ ಎನ್ನುವ ಆಕ್ರೋಶದಿಂದ 32 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಅತಿಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಮನೆಗೆ ಬಂದ ಅತಿಥಿಗಳು ಹೆಚ್ಚು ದಿನಗಳ ಕಾಲ ಮನೆಯಲ್ಲಿ ವಾಸವಾಗಿದ್ದಲ್ಲದೇ ಜೋರಾಗಿ ಗದ್ದಲ ಮಾಡುತ್ತಿದ್ದರಿಂದ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಅಲನಾ ಅನ್ನೆಟ್ಟೆ ಸಾವೆಲ್ ತಿಳಿಸಿದ್ದಾಳೆ.

ಅಲಾನಾ ಅನ್ನೆಟ್ಟೆ ಫ್ಲೋರಿಡಾದ ಪನಾಮಾ ನಗರದಲ್ಲಿರುವ ನಿವಾಸದಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಮಹಿಳೆ ಗುಂಡಿನ ದಾಳಿ ನಡೆಸುತ್ತಿದ್ದಂತೆ ಎದ್ದೇವೋ ಬಿದ್ದೇವೋ ಎನ್ನುವಂತೆ ಮನೆಗೆ ಬಂದ ಅತಿಥಿಗಳು ಮನೆಯಿಂದ ಹೊರಗೊಡಿ ಬಂದು ತಮ್ಮ ವಾಹನದಲ್ಲಿ ಕುಳಿತು ಪರಾರಿಯಾಗಿದ್ದಾರೆ.

Comments are closed.