ಅಂತರಾಷ್ಟ್ರೀಯ

ಇದು ಪ್ರಪಂಚದ ಅತಿ ಕೆಟ್ಟ ಜೈಲುಗಳಲ್ಲಿ ಒಂದು. ಇಲ್ಲಿನ ಖೈದಿಗಳ ಸ್ಥಿತಿ ಹೇಗಿದೆ ಗೊತ್ತಾ?

Pinterest LinkedIn Tumblr

philippinesಮನೀಲಾ: ಪ್ರಪಂಚದಲ್ಲಿಯ ಅತಿ ಕೆಟ್ಟ ಜೈಲು ಹೇಗಿದೆ ಮತ್ತು ಎಲ್ಲಿದೆ ಎಂಬುದರ ಮಾಹಿತಿ ಈ ಸುದ್ದಿ ಓದಿದರೆ ಗೊತ್ತಾಗುತ್ತದೆ ಮತ್ತು ಜೈಲಿನಲ್ಲಿರುವ ಖೈದಿಗಳು ಯಾವ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಈ ಜೈಲು ಇರುವುದು ಪಿಲಿಫೈನ್ ದೇಶದ ಕ್ವಿಜೊನ್ ಎಂಬಲ್ಲಿ. ಜಿಲ್ಲೆಯ ಸಿಟಿ ಕಾರಾಗೃಹದ ಕಥೆಯಿದು. ಇತ್ತೀಚಿಗೆ ಪಿಲಿಫೈನ್ಸ್ ದೇಶದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಒಂದು ವರ್ಷದ ಅವಧಿಯಲ್ಲಿ 8 ಸಾವಿರ ಜನರು ಸಾವನ್ನಪ್ಪಿದ್ದಾರೆ. ಹಾಗೂ ಅನೇಕರು ತಮ್ಮ ತಪ್ಪು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ. ಆದ್ದರಿಂದ ಜೈಲು ಖೈದಿಗಳಿಂದ ತುಂಬಿ ತುಳುಕುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಈ ಜೈಲಿನಲ್ಲಿ ಖೈದಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಹೇಗಿದೆ ಜೈಲು: ಕ್ವಿಜೋನ್ ಸಿಟಿ ಕಾರಾಗೃಹದಲ್ಲಿ 800 ಖೈದಿಗಳನ್ನ ಹೊಂದೋ ಸಾಮಥ್ಯ೵ವಿದೆ. ಆದರೆ ಪ್ರಸ್ತುತ ಜೈಲಿನಲ್ಲಿ 3800ಕ್ಕೂ ಹೆಚ್ಚು ಖೈದಿಗಳು ಇದ್ದಾರೆ. ಒಂದು ಸೆಲ್‍ನಲ್ಲಿ 20 ಜನ ಇರಬಹುದಾದ ಸ್ಥಳದಲ್ಲಿ ಸದ್ಯ 160 ರಿಂದ 200 ಖೈದಿಗಳನ್ನು ಇರಿಸಲಾಗಿದೆ. ಈ ಜೈಲಿನಲ್ಲಿ ಖೈದಿಗಳಿಗೆ ಮಲಗಲು ಖಾಲಿ ಜಾಗ ಸಹ ಸಿಗುವುದಿಲ್ಲ. ಅಂತಹ ಪರಿಸ್ಥತಿಯಲ್ಲಿ ಜೈಲು ಭರ್ತಿಯಾಗಿದೆ. ಜೈಲಿನಲ್ಲಿ ಖೈದಿಗಳು ಧರಿಸುವ ಹಳದಿ ಬಣ್ಣದ ಯುನಿಫಾರ್ಮ್ ಸಹ ಕೆಲವೊಬ್ಬರಿಗೆ ಸಿಗುತ್ತಿಲ್ಲ. ಜೈಲಿನಲ್ಲಿ ಪರಿಮಿತ ಪ್ರಮಾಣದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಖೈದಿಗಳಲ್ಲಿ ಪೈಪೋಟಿ ನಡೆಯುತ್ತದೆ.

ಈ ಕಾರಾಗೃಹವನ್ನು 60ರ ದಶಕದಲ್ಲಿ ನಿರ್ಮಿಸಲಾಗಿತ್ತು. ಮೊದಲು ಇಲ್ಲಿ ಕೋರ್ಟ್‍ನಲ್ಲಿ ವಿಚಾರಣೆ ಎದುರಿಸುವ ಅಪರಾಧಿಗಳನ್ನು ಇರಿಸುತ್ತಿದ್ದರು. ಜೈಲು ಪೂರ್ಣವಾಗಿ ಭರ್ತಿಯಾಗಿದ್ದರಿಂದ ಜೈಲಿನಲ್ಲಿ ಸ್ವಚ್ಚತೆ ಕೂಡ ಇಲ್ಲ.

ಇಲ್ಲಿಯ ವಾಸ ನರಕ ಯಾತನೆ: ಈ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಅನೇಕ ಖೈದಿಗಳು ಇಲ್ಲರಿವುದು ನರಕದಲ್ಲಿ ಇದ್ದಂತೆ ಎಂದಿದ್ದಾರೆ. ಮತ್ತೆ ಕೆಲ ಖೈದಿಗಳು ಇಲ್ಲಿಯ ಪ್ರತಿ ಕ್ಷಣವೂ ಜೀವನದ ಕೊನೆಯ ಕ್ಷಣದಂತೆ ಆಗಿತ್ತು. ಇಲ್ಲಿ ಊಟವನ್ನು ನಿಗಧಿತ ಸಮಯದಲ್ಲಿ ನೀಡುತ್ತಿರಲಿಲ್ಲ. ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Comments are closed.