ರಾಷ್ಟ್ರೀಯ

ದಿಲ್ಲಿಯಲ್ಲಿ ಹೊಸ 500 ರೂ. ನೋಟ್ ವಿತರಣೆ 

Pinterest LinkedIn Tumblr

500-noteನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನವೆಂಬರ್ 8ರಂದು ರಾತ್ರಿ ದೇಶದಲ್ಲಿ 500ರೂ. ಹಾಗೂ 1,000 ನೋಟುಗಳಿಗೆ ನಿಷೇಧವೇರಿದ್ದು, ಆದ್ರೆ ನಿನ್ನೆವರೆಗೆ ಕೇವಲ 2,000 ನೋಟು ಮಾತ್ರ ಜನಸಾಮಾನ್ಯರ ಕೈ ಸೇರಿದೆ. 500 ರೂಪಾಯಿಯ ಹೊಸ ನೋಟುಗಳನ್ನು ಆರ್‍ಬಿಐ ಇಂದು ಬಿಡುಗಡೆ ಮಾಡಿದೆ. ಈ ಬಗ್ಗೆ ಹಣಕಾಸು ಸಚಿವರು ಇಂದು ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿರುವ ಎಸ್‍ಬಿಐನ ಪ್ರಮುಖ ಬ್ರಾಂಚ್‍ಗಳಲ್ಲಿ 500 ಮುಖಬೆಲೆಯ ನೋಟುಗಳನ್ನು ಈಗಾಗಲೇ ವಿತರಿಸಲು ಆರಂಭಿಸಿದ್ದಾರೆ.

500ರೂ. ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬಂದಿರುವುದರಿಂದ ಬ್ಯಾಂಕ್ ವ್ಯವಹಾರಗಳು ಇನ್ನು ಮುಂದೆ ಯಾವುದೇ ಅಡೆತಡೆಗಳಿಲ್ಲದೆ ಸಲೀಸಾಗಿ ನಡೆಯುತ್ತೆ. ಮಾತ್ರವಲ್ಲದೇ ಚಾಲ್ತಿಗೆ ಬಂದಿರುವ 500 ರೂ. ಹಾಗೂ 2,000 ನೋಟುಗಳ ಗಾತ್ರಕ್ಕೆ ತಕ್ಕಂತೆ ಟಿಎಂ ಯಂತ್ರದ ತಾಂತ್ರಿಕ ಸಮಸ್ಯೆಯನ್ನ ಪರಿಹರಿಸಲಾಗುತ್ತದೆ ಎಂಬುವುದಾಗಿ ವರದಿಯಾಗಿದೆ.

ಹೊಸ ನೋಟಿನ ವಿಶೆಷತೆ: ಮೊದಲ ನೋಟಿಗಿಂತ ಹೊಸ ರೂಪದಲ್ಲಿ ಚಲಾವಣೆಗೆ ಬಂದಿರುವ ನೋಟು ವಿಭಿನ್ನವಾಗಿದೆ. ಬಣ್ಣ ಹಾಗೂ ಗಾತ್ರ, ಥೀಮ್, ಭದ್ರತಾ ವೈಶಿಷ್ಟ್ಯ ಹಾಗೂ ವಿನ್ಯಾಸಗಳಲ್ಲಿ ವ್ಯತ್ಯಾಸವಿದೆ. ಹೊಸ ನೋಟಿನ ಮಧ್ಯಭಾಗದಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ. ನೋಟಿನ ಮೇಲೆ ಮುದ್ರಣವಾದ ವರ್ಷ ಹಾಗೂ ನೋಟಿನ ಹಿಂಬದಿಯಲ್ಲಿ ಸ್ವಚ್ಛ ಭಾರತದ ಲೋಗೋ ಇದೆ. ನೋಟಿನ ಹಿಂಭಾಗದಲ್ಲಿ ಭಾರತದ ಧ್ವಜದೊಂದಿಗೆ ಕೆಂಪು ಕೋಟೆಯ ಚಿತ್ರವಿದೆ. ನೋಟಿನ ಎಡಭಾಗದಲ್ಲಿ ಮಹಾತ್ಮಾ ಗಾಂಧೀಜಿ ಭಾವಚಿತ್ರ, ಬಲಭಾಗದಲ್ಲಿ ರಾಷ್ಟ್ರ ಲಾಂಛನವಿದೆ. ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಇದು ಬೆಳಕಿನಲ್ಲಿ ನೀಲಿಬಣ್ಣಕ್ಕೆ ತಿರುಗುತ್ತದೆ. ಇನ್ನು ಅಂಧರಿಗೂ ನೋಟಿನ ಮೌಲ್ಯ ಅರ್ಥವಾಗಲೆಂದು ಬ್ರೈಲ್ ಲಿಪಿ ಬಳಸಲಾಗಿದೆ.

Comments are closed.