ಅಂತರಾಷ್ಟ್ರೀಯ

ಅಧ್ಯಕ್ಷರಾಗಿ ಟ್ರಂಪ್‌ ಆಯ್ಕೆ ರದ್ದು ಕೋರಿದ ಅರ್ಜಿಗೆ 32 ಲಕ್ಷ ಸಹಿ!

Pinterest LinkedIn Tumblr

no-todonald-trumpfiವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗೆ ಬರೊಬ್ಬರಿ 32 ಲಕ್ಷ ಮಂದಿ ಅಮೆರಿಕನ್ನರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಎಲೆಕ್ಟೋರಿಯಲ್ ಕಾಲೇಜ್ ಸಂಸ್ಥೆಗೆ ಈ ಬಗ್ಗೆ ಅರ್ಜಿ ಬಂದಿದ್ದು, ಈ ಆನ್ ಲೈನ್ ಅರ್ಜಿಗೆ 32 ಲಕ್ಷ ಮಂದಿ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಟ್ರಂಪ್ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಕೋರಲಾಗಿದ್ದು, ಹಿಲರಿ ಕ್ಲಿಂಟನ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಕೋರಲಾಗಿದೆ. ಇನ್ನು ಅರ್ಜಿಯಲ್ಲಿ ಟ್ರಂಪ್ ಅವರ ಆಯ್ಕೆ ಸಂವಿಧಾನಾತ್ಮಕವಾಗಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು, ಜನಪ್ರಿಯ ಮತಗಳು ಟ್ರಂಪ್ ಅವರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕದ ಕಾನೂನಿ ಪ್ರಕಾರ ಎಲೆಕ್ಟೋರಲ್‌ ಕಾಲೇಜಿನ ಮತದಾರರು ಟ್ರಂಪ್ ಅವರ ಪರವಾಗಿ ಮತಹಾಕಿದರೆ ಮಾತ್ರ ಅವರು ಅಧಿಕೃತವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ. ಜನಪ್ರಿಯ ಮತಗಳಂತೆ ಟ್ರಂಪ್‌ಗೆ ಅವರು ಮತಹಾಕಿದರೆ ನಿಯೋಜಿತ ಅಧ್ಯಕ್ಷರು ಅಧಿಕೃತವಾಗಿ ಅಧ್ಯಕ್ಷ ಸ್ಥಾನ ಗೆಲ್ಲಲಿದ್ದಾರೆ. ಡಿಸೆಂಬರ್ 19ರಂದು ಎಲೆಕ್ಟೋರಲ್‌ ಕಾಲೇಜಿನ ಮತದಾರರು ಮತ ಹಾಕಲಿದ್ದಾರೆ.
ಟ್ರಂಪ್ ವಿರುದ್ಧ ಮುಂದುವರೆದ ಪ್ರತಿಭಟನೆ, ಓರ್ವನಿಗೆ ಗುಂಡು
ಇನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆವರ ಆಯ್ಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿಭಟನಾಕಾರರ ತಡೆಯಲು ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಇದೇ ವೇಳೆ ಒರೆಗಾನ್ನಲ್ಲಿ ಪ್ರತಿಭಟನಾಕಾರರ ವಿರುದ್ಧ ಆಕ್ಷೇಪಿಸಿದ ವ್ಯಕ್ತಿಗೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಂಡು ಹಾರಿಸಿದಾತನಿಗಾಗಿ ಶೋಧ ನಡೆಸಲಾಗುತ್ತಿದೆ.

Comments are closed.