ರಾಷ್ಟ್ರೀಯ

ಕಪ್ಪುಹಣವನ್ನ ಅಭಿವೃದ್ಧಿಗಾಗಿ ಬಳಸಿಕೊಳ್ಳಿ.. ಮೋದಿಗೆ ಸಾಮಾನ್ಯ ವ್ಯಕ್ತಿ ಕೊಟ್ಟ ಸಲಹೆ

Pinterest LinkedIn Tumblr

noteeeನವದೆಹಲಿ(ನ.13): 500, 1000 ರೂ. ನೋಟುಗಳ ಮೇಲಿನ ನಿಷೇಧ ಘೋಷಣೆಯಾದಾಗಿನಿಂದ ಕಾಳಧನಿಕರು ನಿದ್ದೆ ಮಾಡುತ್ತಿಲ್ಲ. ಹಲವೆಡೆ ನೋಟುಗಳನ್ನ ಸುಡುವುದು, ಕತ್ತರಿಸಿ ಬಿಸಾಡುತ್ತಿರುವ ಬಗ್ಗೆ ಸುದ್ಧಿಯಾಗುತ್ತದೆ. ಆದರೆ, ಈ ರೀತಿ ಆಗುವುದರಿಂದ ದೇಶಕ್ಕೆ ಬಹಳಷ್ಟು ನಷ್ಟ. ಅದರ ಬದಲು ಇದನ್ನ ದೇಶದ ಅಭಿವೃದ್ಧಿ ಬಳಸಿಕೊಳ್ಳಿ ಎಂದು ಸಾಮಾನ್ಯ ವ್ಯಕ್ತಿಯೊಬ್ಬ ಮೋದಿಗೆ ನೀಡಿರುವ ಸಲಹೆ ವೈರಲ್ ಆಗಿದೆ.
ಪ್ರಧಾನಿಗೆ ಸಲಹೆ: @indiantweeter ಎಂಬ ಅಕೌಂಟ್`ನಲ್ಲಿ ಈ ಬಗ್ಗೆ ಮೋದಿಗೆ ಸಲಹೆ ನೀಡಲಾಗಿದ್ದು, 184ಕ್ಕೂಅ ಧಿಕಟೀಟ್ವೀಟ್ ಆಗಿದೆ. ಅಷ್ಟಕ್ಕೂ ಆತನ ಸಲಹೆ ಏನು ಗೊತ್ತಾ..? ಇಂಡಿಯನ್ ಆರ್ಮಿ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕು. ಆ ಅಕೌಂಟಿಗೆ ಯಾರು ಬೇಕಾದರೂ ಎಷ್ಟೇ ಹಣವನ್ನ ಡೆಪಾಸಿಟ್ ಮಾಡಬಹುದು. ಅವರ ಮೇಲೆ ಯಾವುದೇ ತನಿಖೆ ನಡೆಸಬಾರದು. ಇದರಿಂದ, ದೇಶದ ಅಭಿವೃದ್ಧಿಗೆ ಹಣ ಸಿಗುವ ಜೊತೆಗೆ ಹಣ ಹಾಳಾಗುವುದನ್ನೂ ತಡೆಯಬಹುದು ಎಂದು ಸಲಹೆ ನೀಡಿದ್ಧಾರೆ.

Comments are closed.