ಅಂತರಾಷ್ಟ್ರೀಯ

ಅಮೆರಿಕಾದ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಆಯ್ಕೆ

Pinterest LinkedIn Tumblr

amerikaವಾಷಿಂಗ್ಟನ್(ನ.12): ಅಮೆರಿಕಾದ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಆಯ್ಕೆಯಾಗಿದ್ದಾರೆ. ಮೈಕ್ ಪೆನ್ಸ್ 2013 ರಿಂದ ಇಂಡಿಯಾನಾ ರಾಜ್ಯದ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಜಿಯೋ ಬಿಡನ್ ಉಪಾಧ್ಯಕ್ಷರಾಗಿದ್ದು, ಪೆನ್ಸ್ ಅಧಿಕಾರಾವಧಿ 2017 ಜನವರಿಯಿಂದ ಶುರುವಾಗಲಿದೆ.
ನವೆಂಬರ್ 8 ರಂದು ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಡೆಮಾಕ್ರೆಟ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಮಣಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಟ್ರಂಪ್ ಅವರ ಅಧಿಕಾರಾವಧಿ ಕೂಡ ಜನವರಿ 20, 2017 ರಿಂದ ಆರಂಭವಾಗಲಿದೆ. ಟ್ರಂಪ್ ಅವರು ಮೈಕ್ ಪೆನ್ಸ್ ಅವರ ಜೊತೆ ತಮ್ಮ ಅಧ್ಯಕ್ಷೀಯ ತಂಡದ ಇತರ ಸದಸ್ಯರನ್ನು ನೇಮಕ ಮಾಡಿದ್ದು, ಎಲ್ಲರೂ ಮುಂದಿನ ವರ್ಷದ ಜನವರಿಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ. ನೂತನ ತಂಡದೊದಿಗೆ ಅಮೆರಿಕಾದಲ್ಲಿ ಹೊಸ ಬದಲಾವಣೆ ತರುವುದಾಗಿ ಟ್ರಂಪ್ ತಿಳಿಸಿದ್ದಾರೆ.

Comments are closed.