ಅಂತರಾಷ್ಟ್ರೀಯ

ಇಸ್ಲಾಮಿಕ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಸುತ್ತುವರೆದ ಇರಾಕ್ ಸೇನೆ

Pinterest LinkedIn Tumblr

isis-terroristಲಂಡನ್: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಇರಾಕ್ ಸೇನೆ ಸುತ್ತುವರೆದಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಇಸೀಸ್ ಉಗ್ರ ಸಂಘಟನೆಯ ಭದ್ರ ಕೋಟೆಯಾಗಿರುವ ಇರಾಕ್ ನಗರ ಮೊಸುಲ್ ನಲ್ಲಿ ಉಗ್ರ ಸಂಘಟನೆ ಮುಖಂಡ ಬಾಗ್ದಾದಿ ಅಡಗಿಕೊಂಡಿದ್ದು ಇರಾಕ್ ಸೇನೆ, ಉಗ್ರನ ಅಡಗುದಾಣವನ್ನು ಸುತ್ತುವರೆದಿದೆ. ಉಗ್ರ ಸೇನೆಯ ಮುಖಂಡ ಬಾಗ್ದಾದಿ ಇರಾನ್ ಸೇನೆಯಿಂದ ಸುತ್ತುವರೆಯಲ್ಪಟ್ಟಿರುವುದರಿಂದ ಭಯೋತ್ಪಾದಕ ಸಂಘಟನೆ ಬಲ ಕುಗ್ಗಿದ್ದು, ಸೋಲಿನ ಸನಿಹದಲ್ಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲ್ ಬಾಗ್ದಾದಿಯ ಅಡಗುದಾಣದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿರುವ ಸೇನೆ, ಬಾಗ್ದಾದಿಯನ್ನು ಕೊಂದರೆ ಇಸೀಸ್ ಉಗ್ರ ಸಂಘಟನೆ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಇರಾಕ್ ನ ಖುರ್ದಿಷ್ ಪ್ರಾಂತ್ಯದ ಅಧ್ಯಕ್ಷ ಮಸೂದ್ ಬರ್ಜಾನಿ ಕಚೇರಿಯ ಪ್ರಮುಖ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 8-9 ತಿಂಗಳಿನಿಂದ ಅಲ್ ಬಾಗ್ದಾದಿ ತಲೆ ಮರೆಸಿಕೊಂಡಿದ್ದ ಬಾಗ್ದಾದಿ ತನ್ನನ್ನು ಖಲೀಫ್ ಎಂದು ಘೋಷಿಸಿಕೊಂಡಿದ್ದ, ಬಾಗ್ದಾದಿಯನ್ನು ಕೊಂದರೆ ಇಸೀಸ್ ಉಗ್ರ ಸಂಘಟನೆ ಮತ್ತೆ ಹೊಸ ಖಲೀಫನನ್ನು ಆಯ್ಕೆ ಮಾಡಲಿದೆ. ಆದರೂ ಸಂಘಟನೆ ಹಿಂದಿನ ರೀತಿಯಲ್ಲಿ ಉಳಿಯುವುದಿಲ್ಲ ಎಂದು ಹೇಳಲಾಗುತ್ತಿದೆ.

Comments are closed.