ಮನೋರಂಜನೆ

ಏ ದಿಲ್ ಹೈ ಮುಷ್ಕಿಲ್ ಚಿತ್ರ ಬಹಿಷ್ಕಾರಕ್ಕೆ ಗೋವಾ ಮಹಾನಿರ್ದೇಶಕ ಮುಕ್ತೇಶ್ ಚಂದರ್ ಮನವಿ

Pinterest LinkedIn Tumblr

ishಪಣಜಿ: ಕರಣ್ ಜೋಹರ್ ನಿರ್ದೇಶನದ `ಏ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಬಹಿಷ್ಕರಿಸುವಂತೆ ಗೋವಾ ಪೊಲೀಸ್ ಮಹಾನಿರ್ದೇಶಕ ಮುಕ್ತೇಶ್ ಚಂದರ್ ಮನವಿ ಮಾಡಿದ್ದಾರೆ.

ಚಿತ್ರದಲ್ಲಿ ಹೆಸರಾಂತ ಹಿನ್ನಲೆ ಗಾಯಕ ಮಹಮ್ಮದ್ ರಫಿ ಅವರಿಗೆ ಅವಮಾನ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಚಿತ್ರವನ್ನು ನಿಷೇಧಿಸುವಂತೆ ಅವರು ಜನತೆಯನ್ನು ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಚಂದರ್ `ಮಹಮ್ಮದ್ ರಫೀ ಅವರು ಒಬ್ಬ ಭಾರತದ ಹೆಸರಾಂತ ಗಾಯಕರಾಗಿದ್ದಾರೆ. ಈ ಬಗ್ಗೆ ಯಾರು ಅವರಿಗೆ ಸರ್ಟಿಫಿಕೆಟ್ ನೀಡುವ ಅವಶ್ಯಕತೆ ಇಲ್ಲ. ನೀವು ಕೂಡ ರಫಿ ಅವರ ಅಭಿಯಾನಿಯಾಗಿದ್ದಲ್ಲಿ ದಯವಿಟ್ಟು ಚಿತ್ರವನ್ನು ಬಹಿಷ್ಕರಿಸಿ ಎಂಬುವುದಾಗಿ ತಿಳಿಸಿದ್ದಾರೆ.

ಚಿತ್ರದಲ್ಲಿ ಏನಿದೆ?
ರಣಬೀರ್ ಕಪೂರ್ ಚಿತ್ರದಲ್ಲಿ ಗಾಯಕನ ಪಾತ್ರವನ್ನು ಅಭಿನಯಿಸಿದ್ದಾರೆ ದೃಶ್ಯವೊಂದರಲ್ಲಿ ಅವರು ನಾಯಕಿ ಅನುಷ್ಕಾ ಜೊತೆ ಮಾತನಾಡುವಾಗ,’ನನ್ನ ಧ್ವನಿ ಜನ ಮಹಮ್ಮದ್ ರಫಿಗೆ ಹೋಲಿಸುತ್ತಾರೆ’ ಎಂದು ಹೇಳುತ್ತಾರೆ. ಇದಕ್ಕೆ ಅನುಷ್ಕಾ, ‘ಮಹಮ್ಮದ್ ರಫೀಗಾ? ಅವರು ಹಾಡುವುದಕ್ಕಿಂತ ಅಳುವುದೇ ಹೆಚ್ಚು’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದು ರಫಿ ಅಭಿಮಾನಿಗಳ ವಿರೋಧಕ್ಕೆ ಕಾರಣವಾಗಿದೆ.

Comments are closed.