ಅಂತರಾಷ್ಟ್ರೀಯ

ಕಾಶ್ಮೀರಕ್ಕಾಗಿ ಪಾಕ್ ನಲ್ಲಿ ಭಾರತದಿಂದ ರಾಜಕೀಯ ಅಸ್ಥಿರತೆ: ಹಫೀಜ್ ಸಯೀದ್

Pinterest LinkedIn Tumblr
RAWALPINDI: Hafiz Mohammad Saeed, chief of Jamaat-ud-Dawwa and founder of Lashkar-e-Taiba, addresses a news conference in Rawalpindi, Pakistan on Wednesday, April 4, 2012. Saeed, one of Pakistan's most notorious extremists, mocked the United States during a defiant media conference close to the country's military headquarters, a day after the U.S. slapped a $10 million bounty on him. AP/PTI (AP4_4_2012_000159B)
 Hafiz 

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಗೆ ಭಾರತದ ಷಡ್ಯಂತ್ರ ಕಾರಣ ಎಂದು ಲಷ್ಕರ್ -ಎ- ತೊಯ್ಬಾ ಉಗ್ರ ಸಂಘಟನೆಯ ಉಗ್ರ ಹಫೀಜ್ ಸಯೀದ್ ಆರೋಪಿಸಿದ್ದಾನೆ.
ಕಾಶ್ಮೀರ ವಿಷಯದಿಂದ ಜಾಗತಿಕ ಮಟ್ಟದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಹಫೀಜ್ ಸಯೀದ್ ಹೇಳಿರುವುದನ್ನು ಡಾನ್ ಪತ್ರಿಕೆ ವರದಿ ಮಾಡಿದೆ. ಭಾರತ ಸೃಷ್ಟಿ ಮಾಡುತ್ತಿರುವ ರಾಜಕೀಯ ಅಸ್ಥಿರತೆಯಿಂದ ಕಾಶ್ಮೀರದಲ್ಲಿ ಪಾಕ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಕಾಶ್ಮೀರದ ಕಾರ್ಯಸೂಚಿಗೆ ಅಪಾರ ಹಾನಿಯುಂಟಾಗುತ್ತಿದೆ ಎಂದು ಹಫೀಜ್ ಸಯೀದ್ ಅಳಲು ತೋಡಿಕೊಂಡಿದ್ದಾನೆ. 2008 ರ ಮುಂಬೈ ದಾಳಿಯ ರೂವಾರಿಯಾಗಿ 166 ಜನರ ಸಾವಿಗೆ ಕಾರಣನಾಗಿದ್ದ ಉಗ್ರ ಹಫೀಜ್ ಸಯೀದ್, ಭಾರತದಲ್ಲಿರುವ ಕಾಶ್ಮೀರಿಗಳ ದುರವಸ್ಥೆಯನ್ನು ಪಾಕಿಸ್ತಾನದ ಜನರು ಮರೆತಂತಿದೆ ಎಂದು ಹಫೀಜ್ ಸಯೀದ್ ಆತಂಕ ವ್ಯಕ್ತಪಡಿಸಿದ್ದಾನೆ.

Comments are closed.