ಮುಂಬೈ: ಮನೆ ತೋರಿಸುವ ನೆಪದಲ್ಲಿ ಗಂಡ ಹೆಂಡತಿಯನ್ನು ಕರೆದೊಯ್ದ 7 ಜನರು ಗುಂಪೊಂದು ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ ಶಾಕಿಂಗ್ ಘಟನೆ ಮುಂಬೈಯಲ್ಲಿ ನಡೆದಿದೆ.
ಮುಂಬೈನ ಅಂಬೊಲಿಯಲ್ಲಿ ನಿನ್ನೆ ರಾತ್ರಿ ಗಂಡನಜೊತೆ ಬಾಡಿಗೆ ಮನೆ ಹುಡುಕಲು ಹೊರಟ 28 ವಷ9ದ ಮಹಿಳೆಯನ್ನು ಮನೆಯೊಂದರಲ್ಲಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮನೆಯನ್ನು ಪ್ರವೇಶಿಸುತ್ತಿದ್ದಂತೆ, ಗಂಡನನ್ನು 3ಜನರು ಹೊರಗಡೆ ಎಳೆದುಕೊಂಡು ಹೋಗಿ ನಾಲ್ವರು ಮನೆಯೊಳಗೆ ಮಹಿಳೆಯ ಎಳೆದುಕೊಂಡು ಹೋಗಿ ಗ್ಯಾಂಗ್‍ರೇಪ್ ಮಾಡಿದ್ದಾರೆ.
ಈ ಘಟನೆ ಕುರಿತು ಮುಂಬೈ ಪೊಲೀಸ್ ವಕ್ತಾರ ಅಶೋಕ ದುಭೆ ಮಾತನಾಡಿ, ಜನರ ಗುಂಪೊಂದು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು, 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಾದ ಆರೋಪಿಗಳ ಪೈಕಿ ಒಬ್ಬಾತ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಎಂದು ತಿಳಿಸಿದ್ದಾರೆ.