ಅಂತರಾಷ್ಟ್ರೀಯ

ರೋಮನ್ ಸಾಮ್ರಾಜ್ಯದ ಕುರುಹುಗಳು ಪತ್ತೆ

Pinterest LinkedIn Tumblr

roಜೆರುಸಲೇಂ: ಹಿಂದಿನ ಕಾಲದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಶಿಲಾಯುಗದ ಜನತೆ ವಿವಿಧ ಕಲ್ಲು, ಕಟ್ಟಿಗೆಯನ್ನು ಬಳಸಿ ಆಯುಧಗಳು ಮತ್ತು ಸಲಕರಣೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆಹಾರ ಸಿದ್ಧಪಡಿಸಿಕೊಳ್ಳುವುದು, ಬೇಟೆ ಮತ್ತು ತಮ್ಮ ರಕ್ಷಣೆಗೆ ಅವುಗಳ ಬಳಕೆಯಾಗುತ್ತಿತ್ತು. ಆದರೆ ಕ್ರಮೇಣ ಅವುಗಳಲ್ಲಿ ಬದಲಾವಣೆಯಾದಂತೆ, ವಿವಿಧ ರೀತಿಯ ಶಸ್ತ್ರಾಸ್ತ್ರಗಳು, ಬೇಟೆಯ ಸಲಕರಣೆಗಳು ಕಾಣಿಸಿಕೊಂಡವು. ಹೆಚ್ಚು ಉಪಯುಕ್ತ ಮಾದರಿಯ ಶಸ್ತ್ರಾಸ್ತ್ರಗಳ ಬಳಕೆ ಆರಂಭವಾಯಿತು.

ರೋಮನ್ ಚಕ್ರವರ್ತಿಗಳ ಕಾಲದಲ್ಲಿ ಬಳಕೆಯಲ್ಲಿದ್ದ ವಿವಿಧ ಮಾದರಿಯ ಶಸ್ತ್ರಾಸ್ತ್ರಗಳು, ಯುದ್ಧ ಸಲಕರಣೆ, ಕಲ್ಲಿನ ಚೂಪಾದ ಆಯುಧಗಳು, ಹೀಗೆ ಬಗೆಬಗೆಯ ಉಪಕರಣಗಳು ಜೆರುಸಲೇಂನಲ್ಲಿ ಇತ್ತೀಚೆಗೆ ಪತ್ತೆಯಾಗಿದೆ. ಕಲ್ಲಿನ ಉಪಕರಣಗಳ ಪತ್ತೆಯಿಂದಾಗಿ ಉತ್ತೇಜಿತರಾಗಿರುವ ಪುರಾತತ್ವ ಸಂಶೋಧಕರು ಮತ್ತು ವಿಜ್ಞಾನಿಗಳು ಅಲ್ಲಿ ದೊರೆಯಬಹುದಾದ ಮತ್ತಷ್ಟು ಆಯುಧಗಳ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.

ಈಗ ಪತ್ತೆಯಾಗಿರುವ ಸಲಕರಣೆಗಳು 2,000 ವರ್ಷಗಳ ಹಿಂದಿನವು ಎನ್ನಲಾಗಿದ್ದು, ಚೂಪಾದ ಕಲ್ಲಿನ ಆಯುಧಗಳು, ಕಟ್ಟಿಗೆ, ಮರದಿಂದ ತಯಾರಿಸಿದ ವಿಶೇಷ ಉಪಕರಣಗಳು ಈ ಸಂದರ್ಭ ಪತ್ತೆಯಾಗಿವೆ. ಯುದ್ಧದ ಸಂದರ್ಭದಲ್ಲಿ ಸೈನಿಕರು ಬಳಸಿದ್ದ ಆಯುಧಗಳು ಮಾತ್ರವಲ್ಲದೆ, ವಶಪಡಿಸಿಕೊಂಡ ಶತ್ರು ಸೈನಿಕರ ಸಲಕರಣೆಗಳು, ಉಡುಪುಗಳು, ಅವರು ಧರಿಸುತ್ತಿದ್ದ ರಕ್ಷಾ ಕವಚವೂ ಇದರಲ್ಲಿ ಸೇರಿದೆ ಎಂದು ತಜ್ಞರು ತಿಳಿಸಿದ್ದಾರೆ.

ಜೆರುಸಲೇಂನಲ್ಲಿ ಯುದ್ಧದ ಸಂದರ್ಭ ರಷ್ಯನ್ ಕಾಂಪೌಂಡ್ ಎಂಬಲ್ಲಿ ಸ್ಥಾಪಿಸಿದ್ದ ಬೀಝಾಲೆಲ್ ಅಕಾಡೆಮಿ ಆಫ್ ಆರ್ಟ್ಸ್ ಆಂಡ್ ಡಿಸೈನ್ನ ಕಟ್ಟಡವೊಂದನ್ನು ಸೈನಿಕರು ಉರುಳಿಸಿದ್ದು, ಅದರಲ್ಲಿದ್ದ ಪುರಾತನ ಶೈಲಿಯ ಕಲ್ಲು, ವಿವಿಧ ವಿನ್ಯಾಸದ ಗೋಡೆಯಲ್ಲಿ ಬಳಸಿದ್ದ ಗಾರೆ ಸೇರಿ ಹಲವು ವಸ್ತು ಪತ್ತೆಯಾಗಿದ್ದು, ಅದನ್ನು ಸಂಶೋಧನೆ ನಡೆಸಿ ಆ ಕಾಲದ ವಾಸ್ತುಶಿಲ್ಪ, ಕಟ್ಟಡ ಸಲಕರಣೆ ಸೇರಿ ಹಲವು ವಿಚಾರಗಳ ಕುರಿತು ಅಧ್ಯಯನ ನಡೆಸುವ ಇರಾದೆ ತಜ್ಞರಿಗಿದೆಯಂತೆ.

Comments are closed.