ಕರ್ನಾಟಕ

ರೆಡ್ಡಿ ಬೀಗರಿಂದಲೂ ವಿಡಿಯೋ ಆಹ್ವಾನ ಪತ್ರಿಕೆ

Pinterest LinkedIn Tumblr

reddyಬಳ್ಳಾರಿ: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿಯ ಮದುವೆಯ ಆಮಂತ್ರಣ ಪತ್ರಿಕೆ ರಾಜ್ಯದ ತುಂಬೆಲ್ಲಾ ಸುದ್ದಿ ಮಾಡಿತ್ತು. ಅದ್ಧೂರಿಯಾಗಿ ವಿಡಿಯೋ ಆಮಂತ್ರಣ ಪತ್ರಿಕೆ ಮಾಡಿಸಿದ್ದ ಜನಾರ್ದನರೆಡ್ಡಿಯಷ್ಟೇ ಅದ್ಧೂರಿಯಾಗಿ ಅವರ ಬೀಗರು ಸಹ ಅದೇ ರೀತಿಯ ವಿಡಿಯೋ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ.

ತೆಲಗು ಭಾಷೆಯಲ್ಲಿ ಮುದ್ರಣ ಮಾಡಿಸಿರುವ ವಿಡಿಯೋ ಆಮಂತ್ರಣ ಪತ್ರಿಕೆ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅಲ್ಲದೇ ರೆಡ್ಡಿ ತಮ್ಮ ಪುತ್ರಿಯ ವಿವಾಹವನ್ನು ನವಂಬರ್ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿಸಿದರೆ, ಅವರ ಬೀಗರು ನವೆಂಬರ್ 20 ರಂದು ಹೈದರಾಬಾದ್‍ನಲ್ಲಿರುವ ಪೋರ್ಟ್ ಗ್ರ್ಯಾಂಡ್ ನಲ್ಲಿ ಆರತಕ್ಷತೆ ಸಮಾರಂಭ ಹಮ್ಮಿಕೊಂಡಿದ್ದಾರೆ.

ರೆಡ್ಡಿ ಅಳಿಯ, ಹೈದರಬಾದ್ ಉದ್ಯಮಿ ರಾಜೀವ್ ವಿದೇಶದಲ್ಲಿ ರಿಯಲ್ ಎಸ್ಟೇಟ್ ಮತ್ತು ಕನ್‍ಸ್ಟ್ರಕ್ಷನ್ ಕಂಪೆನಿ ನಡೆಸುತ್ತಿದ್ದಾರೆ.

Comments are closed.