ಮೈಸೂರು: ಮೈಸೂರಿನಲ್ಲಿ ಭಾನುವಾರ ರಾತ್ರಿ ಅಪ್ಪ – ಮಗನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಕೃತ್ಯದ ಹಿಂದೆ ಓರ್ವ ಯುವತಿ ಇದ್ದಾಳೆ ಎನ್ನುವ ಅನುಮಾನ ಮೂಡಿದೆ.
ಎನ್.ಆರ್. ಮೊಹಲ್ಲಾದ ಮುಕ್ತಾರ್ ಹಾಗೂ ಅವರ ಮಗ ಮೊಹಿನ್‍ಅಹಮದ್ ಮೇಲೆ ನಾಲ್ವರು ಹಲ್ಲೆ ಮಾಡಿದ್ದರು. ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಅಪ್ಪ ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪ್ರಕರಣದ ಹಿಂದೆ ಓರ್ವ ಯುವತಿ ಇದ್ದಾಳೆ ಎನ್ನುವ ಆರೋಪವನ್ನು ಹಲ್ಲೆಗೆ ಒಳಗಾದ ಸಂಬಂಧಿಗಳು ಮಾಡುತ್ತಿದ್ದಾರೆ. ಹಲ್ಲೆಗೆ ಒಳಗಾದ ಮೋಹಿನ್ ಪತ್ನಿಯ ತಮ್ಮ ಸಿರಾಜ್ ಓರ್ವ ಯವತಿ ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ಮನೆಯಲ್ಲಿ ಸದಾ ಜಗಳವಾಗುತಿತ್ತು. ಈ ಕಾರಣಕ್ಕೆ, ಮೋಹಿನ್ ಆ ಯುವತಿಗೆ ತನ್ನ ಭಾವಮೈದನನ್ನು ಪ್ರೀತಿಸದಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವತಿ ತನ್ನ ಕಡೆಯವರಿಗೆ ಹೇಳಿ ಹಲ್ಲೆ ಮಾಡಿಸಿದ್ದಾಳೆ ಎಂದು ಮೋಹಿನ್ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ಈವರೆಗೂ ಯುವತಿ ಮೇಲೆ ಕೇಸ್ ದಾಖಲಾಗಿಲ್ಲ.
Comments are closed.