ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಖಾ, ಕೇಸರಿ ಶಾಲು ವಿವಾದ ತಲೆದೋರಿದೆ. ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ತರಗತಿ ಪ್ರವೇಶಿಸುತ್ತಿರುವುದಕ್ಕೆ ಪ್ರತಿಯಾಗಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿ ಪ್ರವೇಶಿದ್ದು ವಿವಾದಕ್ಕೆ ಕಾರಣವಾಗಿದೆ.
ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಇದೂವರೆಗೂ ಕಾಲೇಜು ಆವರಣದವರೆಗೂ ಬುರ್ಖಾ ಧರಿಸಿ ಬರುತ್ತಿದ್ದರು. ಆದರೆ ಈಗ ತರಗತಿಯ ಒಳಗೂ ಬುರ್ಖಾ ಧರಿಸಿಕೊಂಡು ಬರುತ್ತಿದ್ದಾರೆ. ಇದು ಇತರೆ ಧರ್ಮದ ವಿದ್ಯಾರ್ಥಿಗಳ ಆಕ್ಷೇಪಕ್ಕೆ ಕಾರಣವಾಗಿದ್ದು, ತರಗತಿಯ ಒಳಗೆ ಬುರ್ಖಾ ಧರಿಸಿ ಬರುವುದನ್ನು ನಿಷೇಧಿಸಬೇಕು ಎಂದು ಕೆಲ ವಿದ್ಯಾರ್ಥಿಗಳು ಕಾಲೇಜಿನ ಪ್ರಾಶುಂಪಾಲರಿಗೆ ದೂರು ನೀಡಿದ್ದಾರೆ.
ಇಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿದ್ದು, ಕೇಸರಿ ಶಾಲನ್ನು ಧರಿಸಿ ತರಗತಿ ಪ್ರವೇಶಿಸಿದ್ದಕ್ಕೆ 15 ವಿದ್ಯಾರ್ಥಿಗಳನ್ನು ಹೊರ ಹಾಕಲಾಗಿದೆ. ಕಾಲೇಜ ಕ್ರಮಕ್ಕೆ ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಡ್ರೆಸ್ ಕೋಡ್ ಎಲ್ಲರೂ ಪಾಲಿಸಬೇಕು ಎಂಬುದು ನಮ್ಮ ಆಗ್ರಹ. ತರಗತಿಯ ಒಳಗೆ ಬುರ್ಖಾ ಧರಿಸಿಕೊಂಡು ಬರಲು ಅನುಮತಿ ನೀಡಿದರೆ, ನಮಗೂ ಕೇಸರಿ ಶಾಲು ಧರಿಸಿಕೊಂಡು ಬರಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕೊನೆಗೆ ಪೋಲಿಸ್‍ರ ಮಧ್ಯಸ್ಥಿಕೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯವರ ನಡುವೆ ಮಾತುಕತೆ ನಡೆದಿದೆ. ಡ್ರೆಸ್ ಕೋಡ್ ಬಗ್ಗೆ ವಿವಾದವಿರುವದರಿಂದ ಕೆಲ ವಿದ್ಯಾರ್ಥಿಗಳು ಇದನ್ನು ಪಾಲಿಸಲು ನಿರಾಕರಿಸಿದ್ದರು. ಈಗ ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಡ್ರೆಸ್ ಕೋಡ್‍ನ್ನು ಪಾಲಿಸಬೇಕು ಎಂದು ಕಾಲೇಜು ಪ್ರಾಂಶುಪಾಲರಾದ ದೇವರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಇತ್ತಿಚಿಗೆ ಈ ರೀತಿಯ ವಿವಾದಗಳು ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳ ಕೆಲ ಕಾಲೇಜುಗಳಲ್ಲಿ ನಡೆದಿತ್ತು.
Comments are closed.