ಅಂತರಾಷ್ಟ್ರೀಯ

ಇವರ ಜನನ-ಮರಣ ಸಮಯ ಒಂದೇ!

Pinterest LinkedIn Tumblr

maranaಸಾಮಾನ್ಯವಾಗಿ ಹುಟ್ಟಿದ ಸಮಯ ಹಾಗೂ ಮೃತಪಡುವ ಸಮಯ ಎರಡು ಒಂದೇ ಆಗಿರುವುದು ಬಹಳ ಅಪರೂಪ. ಆದರೆ ಜಿಮ್ಮಿ ನ್ಯೂವೆಲ್ ಎಂಬ 103 ವರ್ಷ ವಯಸ್ಸಿನ ತಾತನೋರ್ವ ಹುಟ್ಟಿದ ದಿನದಂದೇ ಮೃತಪಟ್ಟಿದ್ದಾರೆ. ಇನ್ನೂ ವಿಶೇಷ ಎಂದರೆ ಅವರು ಹುಟ್ಟಿದ ಸಮಯ ಹಾಗೂ ಮೃತಪಟ್ಟ ಸಮಯ ಎರಡೂ ಒಂದೇ ಆಗಿತ್ತಂತೆ! ಜಿಮ್ಮಿ ನ್ಯೂವೆಲ್ ಎಂಬುವವರು ಅಕ್ಟೋಬರ್ 11, 1913ರಂದು ಮಧ್ಯಾಹ್ನ ಲೀಡ್ಸ್ ನಗರದಲ್ಲಿ ಜನಿಸಿದ್ದರು. ಇವರು ತಮ್ಮನ್ನು ಬಹುಕಾಲ ವಿಜ್ಞಾನ ಲೋಕಕ್ಕೆ ಮುಡಿಪಾಗಿಟ್ಟಿದ್ದರು. ಅದೇ ರೀತಿ ಅಕ್ಟೋಬರ್ 11, 2016ರಂದು ಮಧ್ಯಾಹ್ನ ಮಗ ಗ್ರಹಾಮ್ ಕೈ ಹಿಡಿದುಕೊಂಡಿದ್ದ ಸಂದರ್ಭದಲ್ಲಿಯೇ ಇವರು ಮೃತಪಟ್ಟಿದ್ದಾರೆ.

‘ನನ್ನ ತಂದೆ ಜನಿಸುವಾಗ ಮಧ್ಯಾಹ್ನ 12 ಗಂಟೆ ಆಗಿತ್ತು. ಈ ವೇಳೆ ಲೀಡ್ಸ್ನ ಟವ್ನ್ ಹಾಲ್ನ ಗಂಟೆ ಬಾರಿಸುತ್ತಿತ್ತು. ಈ ಬಗ್ಗೆ ಅವರು ನಮಗೆ ಸದಾ ಹೇಳುತ್ತಿದ್ದರು. ಅ.11ರಂದು ಕೂಡಾ ಮಧ್ಯಾಹ್ನ 12 ಗಂಟೆ ಆಗುವುದರಲ್ಲಿತ್ತು. ಈ ಸಂದರ್ಭದಲ್ಲಿ ನಾನು ಮಗನೊಂದಿಗೆ ಮಾತನಾಡುತ್ತಿದ್ದೆ. ಟೌನ್ಹಾಲ್ನಲ್ಲಿ 12 ಗಂಟೆ ಬಾರಿಸುತ್ತಿದ್ದಂತೆ ನಮ್ಮ ತಂದೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯನ್ನು ನೋಡಿ ನಮಗೆ ಆಶ್ಚರ್ಯ ಉಂಟಾಗಿತ್ತು’ ಎಂದು ಅವರ ಮಗ ಗ್ರಹಾಮ್ ಹೇಳಿಕೊಂಡಿದ್ದಾರೆ.
ಸಾಯುವುದಕ್ಕೂ 16 ದಿನ ಮೊದಲು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಾರೋಗ್ಯಕ್ಕೆ ತುತ್ತಾಗದಿದ್ದ ಪಕ್ಷದಲ್ಲಿ ಇವರ 103ನೇ ವರ್ಷದ ಜನ್ಮದಿನಾಚರಣೆಯನ್ನು ಸ್ಪೇನ್ನಲ್ಲಿ ಆಚರಿಸಿಕೊಳ್ಳಲು ಬಯಸಿದ್ದೆವು ಎಂದು ಗ್ರಹಾಮ್ ತಿಳಿಸಿದ್ದಾರೆ.

Comments are closed.