devegಬೆಂಗಳೂರು: ನಮ್ಮ ರೈತರು ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ಜಲಾಶಯ ಕಟ್ಟಿಕೊಂಡರೆ ಬೇರೆಯವರಿಗೆ ನೀರು ಕೊಡಿ ಅಂತಾರೆ. ನಾನು ಬದುಕಿರುವಾಗಲೇ ನಮ್ಮ ಜಲಾಶಯದ ನೀರು ನಮ್ಮದೇ ರೈತರ ಹೊಲಕ್ಕೆ ಹೋಗದೇ ಇರುವಾಗ ಇನ್ನೆಷ್ಟು ದಿನ ಇದನ್ನೆಲ್ಲ ನೋಡಿ ಬದಕಬೇಕು ಅನ್ನಿಸಿತು. ಪ್ರಧಾನಿಗೆ ಈ ಎಲ್ಲಾ ವಿಚಾರ ಮನದಟ್ಟು ಮಾಡಲಿಕ್ಕಾಗಿಯೇ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಂಡೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಒಕ್ಕಲಿಗರ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಎಚ್.ಡಿ.ದೇವೇಗೌಡ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಈ ಹಿಂದೆ ಕಾಲಕ್ಕೆ ಸರಿಯಾಗಿ ಮಳೆ ಬರುತ್ತಿತು ರೈತ ನೆಮ್ಮಯಿಂದ ಇದ್ದ. ಈಗ ಪರಿಸ್ಥಿತಿ ಹಾಗಿಲ್ಲ. ಸರಿಯಾದ ಸಮಯಕ್ಕೆ ಮಳೆ ಬಾರದೇ ರೈತ ಕಂಗಾಲಾಗಿದ್ದಾನೆ. ರಾಜ್ಯದಲ್ಲಿ ನೀರಾವರಿ ಸೌಲಭ್ಯ ಸಹ ಶೇ.30ರಷ್ಟು ಇದೆಯಷ್ಟೆ. ರಾಜ್ಯ ಇದಲ್ಲದೇ ಇನ್ನೆರಡು ನದಿಗಳಾದ ಕಾವೇರಿ ಮತ್ತು ಕೃಷ್ಣ ನದಿ ನೀರು ಹಂಚಿಕೆ ವಿವಾದಕ್ಕೆ ಸಿಲುಕಿದೆ. ಒಕ್ಕಲುತನವೇ ಕವಲು ದಾರಿಯಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಡಾ.ಎಂ.ಎಚ್.ಮರಿಗೌಡ ಶತಮಾನೋತ್ಸವ ಕಾರ್ಯಕ್ರಮಕ್ಕೆ ದೇವೇಗೌಡ ಚಾಲನೆ ನೀಡಿ ಈ ಕುರಿತು ಮಾತನಾಡಿದರು. ನೆಲ, ಜಲದ ವಿಚಾರವಾಗಿ ಉಸಿರು ಇರುವ ತನಕ ಹೋರಾಟ ನಡೆಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಬಿಜೆಪಿ ನಾಯಕ ಸಿ.ಟಿ.ರವಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೋ.]ೕನಿವಾಸಯ್ಯ, ಒಕ್ಕಲಿಗ ಸಂಘದ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಉಪಸ್ಥಿತರಿದ್ದರು.