ರಾಷ್ಟ್ರೀಯ

ಮಣಿಪುರ ಮುಖ್ಯಮಂತ್ರಿ ಮೇಲೆ ಗುಂಡಿನ ದಾಳಿ

Pinterest LinkedIn Tumblr

manipuraಇಂಪಾಲ್: ನಾಗಾಲ್ಯಾಂಡ್ನ ರಾಷ್ಟ್ರೀಯ ಸಮಾಜವಾದಿ ಸಂಘಟನೆಗೆ (ಎನ್ಎಸ್ಸಿಎನ್) ಸೇರಿದವರು ಎಂದು ಶಂಕಿಸಲಾದ ಕೆಲ ದುಷ್ಕರ್ವಿುಗಳು ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಮೇಲೆ ದಾಳಿಗೆ ಯತ್ನಿಸಿದ ಘಟನೆ ಸೋಮವಾರ ಬೆಳಗ್ಗೆ ಉಖ್ರುಲ್ ಜಿಲ್ಲಾಕೇಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ ಮಣಿಪುರ ರೈಫಲ್ ದಳಕ್ಕೆ ಸೇರಿದ ಇಬ್ಬರು ಜವಾನರು ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 9.30ರ ಸುಮಾರಿಗೆ ಸಿಎಂ ಇಬೋಬಿ ಸಿಂಗ್ ಅವರು ಹೆಲಿಕಾಪ್ಟರ್ನಲ್ಲಿ ಉಖ್ರುಲ್ಗೆ ಬಂದಿಳಿಯುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಇಬೋಬಿ ಸಿಂಗ್ ದಾಳಿಯಿಂದ ಪಾರಾಗಿದ್ದಾರೆ. ಗುಂಡಿನ ದಾಳಿ ಬಳಿಕ ತಲೆಮರೆಸಿಕೊಂಡಿರುವ ದುಷ್ಕರ್ವಿುಗಳಿಗಾಗಿ ತೀವ್ರ ಹುಡುಕಾಟ ನಡೆದಿದೆ. ಆಸ್ಪತ್ರೆ ಉದ್ಘಾಟನೆ ಹಿನ್ನೆಲೆಯಲ್ಲಿ ಉಖ್ರುಲ್ಗೆ ಆಗಮಿಸಿದ್ದರು ಎನ್ನಲಾಗಿದೆ.

ಘಟನೆಯ ಬಳಿಕ ಸಿಎಂ ಇಬೋಬಿ ಸಿಂಗ್ ಅದೇ ಹೆಲಿಕಾಪ್ಟರ್ನಲ್ಲಿ ಇಂಪಾಲ್ಗೆ ಮರಳಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾರಾವರಣ ಇದ್ದು, ದುಷ್ಕರ್ವಿುಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದು ಎನ್ಎಸ್ಸಿಎನ್ ಸಂಘಟನೆಗೆ ಸೇರಿದ ಉಗ್ರರು ಎಂದು ಶಂಕಿಸಲಾಗಿದೆ.

ಕಳೆದ ರಾತ್ರಿಯಷ್ಟೇ ಉಖ್ರುಲ್ನಲ್ಲಿ ಎನ್ಎಸ್ಸಿಎನ್ ಉಗ್ರರು ಬಾಂಬ್ ಸ್ಪೋಟಿಸಿದ ಪರಿಣಾಮ ಯೋಧರೊಬ್ಬರು ಗಾಯಗೊಂಡಿದ್ದರು. ಬೆನ್ನಿಗೆ ಸೋಮವಾರ ಮುಂಜಾನೆ ಈ ಘಟನೆ ಸಂಭವಿಸಿದೆ.

Comments are closed.