ಅಂತರಾಷ್ಟ್ರೀಯ

ಕತ್ತೆ- ಝೀಬ್ರಾ ಕ್ರಾಸ್ ಬ್ರೀಡಿಂಗ್‍ನಿಂದ ಜನಿಸಿದ ಮರಿ!

Pinterest LinkedIn Tumblr

katteಬೀಜಿಂಗ್: ನೀವು ಝೀಬ್ರಾ ಕ್ರಾಸಿಂಗ್ ಬಗ್ಗೆ ಕೇಳಿರ್ತೀರ. ಅದು ಜನರು ರಸ್ತೆ ದಾಟೋಕೆ ಅಂತ ಹಾಕಲಾಗುವ ಬಿಳಿ ಬಣ್ಣದ ಅಡ್ಡಗೆರೆ. ಅದ್ರೆ ಝೀಬ್ರಾಗೂ ಕತ್ತೆಗೂ ಕ್ರಾಸಿಂಗ್ ಮಾಡಿದ್ರೆ ಹೇಗಿರುತ್ತದೆ? ಚೈನಾದ ಮೃಗಾಲಯವೊಂದರಲ್ಲಿ ಕತ್ತೆಯ ಜೊತೆ ಝೀಬ್ರಾವನ್ನ ಕ್ರಾಸ್ ಬ್ರೀಡಿಂಗ್ ಮಾಡಲಾಗಿದೆ.

ಹೌದು. ಚೀನಾದ ಸುಕೈನ್‍ನಲ್ಲಿರೋ ವನ್ಯಜೀವಿಧಾಮದಲ್ಲಿ ಹೆಣ್ಣು ಝೀಬ್ರಾ ಹಾಗೂ ಗಂಡು ಕತ್ತೆಯನ್ನ ಕ್ರಾಸ್ ಬ್ರೀಡಿಂಗ್ ಮಾಡಲಾಗಿದ್ದು, ಝೀಬ್ರಾಸ್ ಅಥವಾ ಝಾಂಕಿ ಎಂಬ ಮಿಶ್ರ ತಳಿಯ ಪ್ರಾಣಿ ಜನಿಸಿದೆ.

ಈ ಹೈಬ್ರಿಡ್ ತಳಿಯ ಪ್ರಾಣಿ ತನ್ನ ಪೋಷಕರೊಂದಿಗೆ ಆಟವಾಡೋದನ್ನ ವಿಡಿಯೋ ಮಾಡಲಾಗಿದೆ. ಇದನ್ನ ನೋಡಿದಾಗ ಯಾವುದೋ ವಿಚಿತ್ರ ಪ್ರಾಣಿ ಅಡ್ಡಗೆರೆಗಳಿರೋ ಸಾಕ್ಸ್ ತೊಟ್ಟಿರುವಂತೆ ಕಾಣುತ್ತದೆ. ಮರಿಯ ದೇಹವೆಲ್ಲಾ ಕತ್ತೆಯಂತಿದ್ದು ಅದರ ಕಾಲುಗಳಲ್ಲಿ ಮಾತ್ರ ಝೀಬ್ರಾ ರೀತಿ ಬಿಳಿ ಹಾಗೂ ಕಪ್ಪು ಬಣ್ಣದ ಅಡ್ಡಗೆರೆಗಳಿವೆ.

ಈ ರೀತಿ ಝೀಬ್ರಾ ಮತ್ತು ಕತ್ತೆಯ ಮಿಶ್ರ ತಳಿಯ ಪ್ರಾಣಿ ಜನಿಸಿರುವುದು ಇದೇ ಮೊದಲೇನಲ್ಲ. 2013ರಲ್ಲಿ ಇಟಲಿಯ ಫ್ಲಾರೆನ್ಸ್ ನಲ್ಲಿ ಗಂಡು ಝೀಬ್ರಾ ಹಾಗೂ ಹೆಣ್ಣು ಕತ್ತೆಗೆ ಮರಿ ಜನಿಸಿತ್ತು.

Comments are closed.