ರಾಷ್ಟ್ರೀಯ

ಏರ್‌ಟೆಲ್‌ನಿಂದ 259 ರು,ಗೆ 10 ಜಿಬಿ ಡೇಟಾ

Pinterest LinkedIn Tumblr

airtelಮುಂಬೈ: ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್‌ ಇದೀಗ ತನ್ನ ಗ್ರಾಹಕರಿಗೆ 259 ರುಪಾಯಿಗೆ 10 ಜಿಬಿ ಡೇಟಾ ಆಫರ್ ನೀಡಿದೆ.
ಏರ್ಟೇಲ್ ಬಳಕೆದಾರರು ಯಾವುದೇ 4ಜಿ ಫೋನ್ ಹೊಂದಿದ್ದರೆ ಅಂತಹವರು ಈ ಸೇವೆ ಪಡೆಯಬಹುದಾಗಿದೆ. ರಿಚಾರ್ಚ್ ಮಾಡಿದ ತಕ್ಷಣ ಒಂದು ಜಿಬಿ ಡೇಟಾ ನಿಮ್ಮ ಮೊಬೈಲ್ ಫೋನ್ ಗೆ ಬರುತ್ತದೆ. ನಂತರ ಗೂಗಲ್ ಪ್ಲೇಸ್ಟೋರ್ ನಲ್ಲಿ ಮೈ ಏರ್ಟೆಲ್ ಆಪ್ ಇನ್ ಸ್ಟಾಲ್ ಮಾಡಿಕೊಂಡು ಉಳಿದ 9 ಜಿಬಿ ಡೇಟಾವನ್ನು ಉಪಯೋಗಿಸಬಹುದು.
ಮೊದಲಿಗೆ ಈ ಆಫರ್ ಅನ್ನು ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಈ ಆಫರ್ ಘೋಷಿಸಲಾಗಿತ್ತು. ಇದೀಗ ದೇಶಾದ್ಯಂತ ಈ ಸೇವೆ ಲಭಿಸಲಿದೆ. ಈ ಡೇಟಾ ಅವಧಿ ಒಂದು ತಿಂಗಳು ಅಂದರೇ 28 ದಿನ ಮಾತ್ರ ಬಳಸಬಹುದಾಗಿದೆ.

Comments are closed.