ಅಂತರಾಷ್ಟ್ರೀಯ

ಭೂಮಿಗೆ ಕಾದಿದೆ ಕಂಟಕ : ಅಮ್ಲಜನಕ ಪ್ರಮಾಣ ತ್ರೀವ ಕಡಿಮೆ – ವಿಜ್ಜಾನಿಗಳು ಕಳವಳ

Pinterest LinkedIn Tumblr

Earth-like-Earth-600

ಭೂಮಿಯ ಮೇಲಿನ ಜೀವ ಜನಕವಾಗಿರುವ ಆಮ್ಲಜನಕದ ಪ್ರಮಾಣ ಕಳೆದ 8 ಲಕ್ಷ ವರ್ಷಗಳಿಂದ ಕಡಿಮೆಯಾಗಿದ್ದು, ಕಾರ್ಖಾನೆಗಳಲ್ಲಿ ದಹಿಸಲ್ಪಡುತ್ತಿರುವ ಪಳೆಯುಳಿಕೆ ವಸ್ತುಗಳಿಂದಾಗಿ ಒಂದು ಶತಮಾನದಲ್ಲಿ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕ್ಷೀಣಿಸಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಕಳೆದ 30 ವರ್ಷಗಳ ದಾಖಲೆಗಳನ್ನು ಪರಾಮರ್ಶಿಸಿದ ಅಮೆರಿಕದ ಪ್ರಿನ್ಸ್ಟನ್ ವಿವಿಯ ಸಂಶೋಧಕರು ಭೂಮಿ ಮೇಲೆ ಶೇ. 0.7ರಷ್ಟು ಆಮ್ಲಜನಕ ಕ್ಷೀಣಿಸಿರುವುದನ್ನು ಕಂಡುಕೊಂಡಿದ್ದಾರೆ. ಆದರೆ, ಕಾರ್ಖಾನೆಗಳಿಂದ ಬಿಡುಗಡೆಯಾದ ಇಂಗಾಲದ ಡೈ ಆಕ್ಸೈಡ್ನಿಂದಾಗಿ ಕಳೆದ 10 ವರ್ಷಗಳಲ್ಲಿ ಆಮ್ಲಜನಕದ ಪ್ರಮಾಣ ಶೇ.0.1ರಷ್ಟು ಕಡಿಮೆಯಾಗಿರುವುದಕ್ಕೆ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಭೂಮಿಗೆ ಅಪಾಯವಾಗುವ ಸಂಭವವಿದೆ ಎಂದಿದ್ದಾರೆ.

Comments are closed.