ವೀಡಿಯೋ ವರದಿಗಳು

ಗೆಳೆಯ ಮದುವೆಯಾಗುತ್ತಿಯ ಅಂತ ಕೇಳಿದಾಗ ಖುಷಿಯಿಂದ ಹುಡುಗಿ ಏನಾದಳು ಗೊತ್ತಾ..? ಈ ವೀಡಿಯೊ ನೋಡಿ….

Pinterest LinkedIn Tumblr

https://youtu.be/rgQIb5JyQ5g

ಮೆಕ್ಸಿಕೋ: ತಾನು ಇಷ್ಟ ಪಡೋ ಹುಡುಗ ಮದುವೆಯಾಗ್ತೀಯಾ ಅಂತ ಉಂಗುರ ಕೊಟ್ಟು ಪ್ರಪೋಸ್ ಮಾಡಿದಾಗ ಎಷ್ಟೋ ಯುವತಿಯರು ಖುಷಿಯಿಂದ ಅಳೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ಯುವತಿಗೆ ಆಕೆಯ ಬಾಯ್‍ಫ್ರೆಂಡ್, ಮದುವೆ ಆಗ್ತೀಯಾ? ಅಂತ ಕೇಳಿದ್ದೇ ತಡ ಆಕೆ ತಲೆ ತಿರುಗಿ ಬಿದ್ದಿದ್ದಾಳೆ. ಇದರ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಕೇವಲ 7 ಸೆಕೆಂಡ್‍ನ ಈ ವಿಡಿಯೋ 40 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಮೆಕ್ಸಿಕೋ ಮೂಲದ ಮಾಡೆಲ್ ರೆಯ್ನಾ ರೆಂಟೀರಿಯಾಗೆ ಆಕೆಯ ಗೆಳೆಯ ಬೆನಿಟೆಸ್ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ. ಹಿನ್ನೆಲೆಯಲ್ಲಿ ಸಂಗೀತ ನುಡಿಸುವವರನ್ನು ನಿಲ್ಲಿಸಿ ಕೈಯಲ್ಲಿ ಉಂಗುರವಿದ್ದ ಕಪ್ಪು ಬಾಕ್ಸ್ ಹಿಡಿದು ರೆಯ್ನಾಗೆ ಗೆ ಪ್ರಪೋಸ್ ಮಾಡಿಯೇಬಿಟ್ಟ. ಆದ್ರೆ ರೆಯ್ನಾ ಆತನ ಬಳಿ ಬಂದು ಉಂಗುರದ ಬಾಕ್ಸ್ ಸ್ವೀಕರಿಸಿ ತಕ್ಷಣ ತಲೆ ತಿರುಗಿ ಬಿದ್ದಳು.

ಆಕೆ ಈಗ ಚೇತರಿಸಿಕೊಂಡಿದ್ದು, ಈ ಪ್ರಪೋಸಲ್‍ಗೆ ಸಮ್ಮತಿ ಸೂಚಿಸಿದ್ದಾಳೆ. ನಾನು ಚೆನ್ನಾಗಿದ್ದೇನೆ. ನಾನು ತುಂಬಾ ಉತ್ಸುಕಳಾಗಿದ್ದೆ, ಇದನ್ನು ನಂಬಲಾಗದೆ ಶಾಕ್ ಆಗಿತ್ತು. ಈಗ ಖುಷಿಯಗಿ ಕ್ಷೇಮವಾಗಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಸ್ಪಾನಿಷ್ ಭಾಷೆಯಲ್ಲಿ ಪೋಸ್ಟ್ ಹಾಕಿದ್ದಾಳೆ.

Comments are closed.