ಮನೋರಂಜನೆ

ಸದ್ದಿಲ್ಲದೇ ಮದುವೆ ಆಗ್ತಿದ್ದಾರೆ ಬಹುಭಾಷಾ ನಟಿ ನಿಖಿತಾ ತುಕ್ರಾಲ್

Pinterest LinkedIn Tumblr

nikhita

ಮುಂಬೈ: ಬಹುಭಾಷಾ ನಟಿ ನಿಖಿತಾ ತುಕ್ರಾಲ್ ಸದ್ದಿಲ್ಲದೇ ಮದುವೆ ಆಗ್ತಿದ್ದಾರೆ. ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಮಾಂಗೋ ಜೊತೆ ನಿಖಿತಾ ಸಪ್ತಪದಿ ತುಳಿಯಲಿದ್ದಾರೆ.

ಶನಿವಾರ ಹಾಗೂ ಭಾನುವಾರ ಮುಂಬೈನ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಗುರುವಾರದಂದು ಮೆಹೆಂದಿ ಕಾರ್ಯಕ್ರಮ, ಅದಾದ ನಂತರ ಸಂಗೀತ್ ಕಾರ್ಯಕ್ರಮವೂ ಇರಲಿದೆ. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ನಿಖಿತಾ ಕುಟುಂಬದವರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಮದುವೆಯ ನಂತರ ಖಂಡಿತ ನಟಿಸುತ್ತೇನೆ. ಕನ್ನಡದ ರಾಜಸಿಂಹ ಸೇರಿದಂತೆ ತೆಲುಗು ಹಾಗೂ ಮಲಯಾಳಂನಲ್ಲಿ ಕೆಲವು ಸಿನಿಮಾಗಳನ್ನು ಪೂರೈಸಿವುದು ಬಾಕಿ ಇದೆ ಅಂತ ನಿಖಿತಾ ಹೇಳಿದ್ದಾರೆ.

ಮೊದಲ ನೋಟದಲ್ಲೇ ಪ್ರೇಮ: ಕಳೆದ ಡಿಸೆಂಬರ್‍ನಲ್ಲಿ ಸಂಬಂಧಿಕರ ಮದುವೆಯಲ್ಲಿ ನನ್ನನ್ನು ನೋಡಿದ ಗಗನ್‍ದೀಪ್‍ಗೆ ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ನಂತರ ಅವರು ನನಗೆ ಮುಂಬೈನ ರೆಸ್ಟೊರೆಂಟ್‍ವೊಂದರಲ್ಲಿ 3.36 ಕ್ಯಾರೆಟ್‍ನ ವಜ್ರದ ಉಂಗುರ ನೀಡಿ ಪ್ರಪೋಸ್ ಮಾಡಿದ್ರು. ಈಗ ಹಿರಿಯರ ಆಣತಿಯಂತೆ ಮದುವೆ ನಿಶ್ಚಯವಾಗಿದೆ ಅಂತ ನಿಖಿತಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಕನ್ನಡದಲ್ಲಿ ನಟ ದರ್ಶನ್ , ಪುನೀತ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ.

Comments are closed.