ಅಂತರಾಷ್ಟ್ರೀಯ

12 ಸಾವಿರ ಪೊಲೀಸರನ್ನು ಅಮಾನತು ಮಾಡಿದ ಟರ್ಕಿ

Pinterest LinkedIn Tumblr

tarkiಟರ್ಕಿ: ಕಳೆದ ಜುಲೈನಲ್ಲಿ ಸರ್ಕಾರದ ವಿರುದ್ಧ ಸೇನಾ ದಂಗೆಯ ಮಾಸ್ಟರ್ ಮೈಂಡ್ ಮುಸ್ಲಿಂ ಧಾರ್ಮಿಕ ಮುಖಂಡ ಫೆತುಲ್ಲಾ ಗುಲೇನ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಟರ್ಕಿ ಸರ್ಕಾರ 12 ಸಾವಿರ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ದಂಗೆಯ ತನಿಖೆಯಲ್ಲಿ ಭಾಗಿಯಾಗಿದ್ದ 12,801 ಪೊಲೀಸರನ್ನು ಅಮಾನತು ಮಾಡಿದ್ದು, ಇದರಲ್ಲಿ 2,523 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ ಎಂದು ಪ್ರಕಟಣೆಯಲ್ಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಜುಲೈ 16ರಂದು ಟರ್ಕಿಯಲ್ಲಿ ಸರ್ಕಾರದ ವಿರುದ್ಧ ಬಂಡೆದ್ದ ಸೈನಿಕರು ತಡ ರಾತ್ರಿ ಕ್ಷಿಪ್ರ ಕ್ರಾಂತಿಗೆ ಯತ್ನಿಸಿದ್ದು ಇದನ್ನು ಖಂಡಿಸಿ ಇಡೀ ಟರ್ಕಿಗೆ ಟರ್ಕಿ ಬೀದಿಗಿಳಿದು ಸೈನಿಕರ ಯತ್ನವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಹಿಂಸಾತ್ಮಕ ಹೋರಾಟದಲ್ಲಿ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 1500ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದವು.

Comments are closed.