ರಾಷ್ಟ್ರೀಯ

ಬಿಸಿಸಿಐ ಅಧಿಕಾರಿಗಳನ್ನು ನಗ್ನವಾಗಿ ಕಂಬಕ್ಕೆ ಕಟ್ಟಿ ನೂರು ಛಡಿ ಏಟು ಕೊಡಬೇಕು: ಕಾಟ್ಜು ಟ್ವೀಟ್

Pinterest LinkedIn Tumblr

Katju_fನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕೆಂಡೇಯ ಕಾಟ್ಜು ಅವರು ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧಿಕಾರಿಗಳನ್ನು ನಗ್ನವಾಗಿ ಕಂಬಕ್ಕೆ ಕಟ್ಟಿ ನೂರು ಛಡಿ ಏಟು ಕೊಡಬೇಕು ಎಂದು ಟ್ವೀಟಿಸಿದ್ದಾರೆ.
Follow
Markandey Katju @mkatju
This treatment isnt enough. Aisan na manahin. Lodha shud get BCCI officials tied naked to a pole & given 100 lashes each on their behinds
1:28 PM – 4 Oct 2016
36 36 Retweets 67 67 likes
ಭಾರತೀಯ ಕ್ರಿಕೆಟ್ ಸಂಸ್ಥೆ ಹಾಗೂ ಲೋಧಾ ಸಮಿತಿ ನಡುವಿನ ತಿಕ್ಕಾಟ ಸಂಬಂಧ ಟ್ವೀಟ್ ಮಾಡಿರುವ ಕಾಟ್ಜು ಅವರು ಬಿಸಿಸಿಐ ಅಧಿಕಾರಿಗಳಿಗೆ ಇಂತ ಘೋರ ಶಿಕ್ಷೆ ನೀಡಬೇಕು ಎಂದು ಟ್ವೀಟಿಸಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.
ಈ ಹಿಂದೆ ಲೋಧಾ ಸಮಿತಿ ನಕಲಿ ಎಂದು ಕರೆದಿದ್ದ ಕಾಟ್ಜು ಅವರು ಬಿಸಿಸಿಐ ಮೇಲೆ ಸುಪ್ರೀಂಕೋರ್ಟ್ ಸುಧಾರಣೆಗಳನ್ನು ಹೇರುವುದಕ್ಕೆ ಸಾಧ್ಯವಿಲ್ಲ. ಲೋಧಾ ಸಮಿತಿ ರಚಿಸಿರುವ ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ ಮತ್ತು ಕಾನೂನು ಬಾಹಿರ. ಸಂವಿಧಾನದ ತತ್ವಗಳನ್ನು ಈ ಆದೇಶದಲ್ಲಿ ಉಲ್ಲಂಘಿಸಲಾಗಿದೆ ಎಂದು ಹೇಳಿದ್ದರು.

Comments are closed.