ಅಂತರಾಷ್ಟ್ರೀಯ

ಇಂಥ ಮದುವೆ ನೀವು ಖಂಡಿತ ನೋಡಿರಲಿಕ್ಕಿಲ್ಲ…ವಧುವಿನ ಬಟ್ಟೆಯ ಬೆಲೆ ಬರೋಬರಿ 1.75 ಲಕ್ಷ ಡಾಲರ್ ! ಈ ಮದುವೆ ಇಷ್ಟೊಂದು ವೈಭವೋಪೇತವಾಗಿ ನಡೆಯಲು ಕಾರಣ ಇಲ್ಲಿದೆ…

Pinterest LinkedIn Tumblr

Slovakian gypsy wedding with bride showered with gold and 500 euro notes went viral in Slovakia and Russia

ಸಾಮಾನ್ಯವಾಗಿ ಮದುವೆ ಎಂದರೆ ಅದ್ಧೂರಿತನ ಇರುತ್ತದೆ. ಅದರಲ್ಲೂ ಶ್ರೀಮಂತ ಮನೆತನದ ಮದುವೆ ಎಂದರೆ ಕೇಳಬೇಕೆ? ಅಲ್ಲಿ ಎಲ್ಲವೂ ವೈಭವೋಪೇತ. ಅದೇ ರೀತಿ ಕೇಂದ್ರ ಯುರೋಪ್ನ ಸ್ಲೋವೇಕಿಯನ್ ರಾಷ್ಟ್ರದಲ್ಲಿ ಇತ್ತೀಚಿಗೆ ವೈಭವದ ಮದುವೆಯೊಂದು ನಡೆದಿದೆ. ಈ ಮದುವೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಸುದ್ದಿ ಮಾಡಿದೆ.

Slovakian gypsy wedding with bride showered with gold and 500 euro notes went viral in Slovakia and Russia

 

Slovakian gypsy wedding with bride showered with gold and 500 euro notes went viral in Slovakia and Russia

 

Slovakian gypsy wedding

ಎವ್ಕಾ ಮತ್ತು ಲುಕಾ ಎಂಬುವವರ ಮದುವೆಯನ್ನು ಕುಟುಂಬ ಅದ್ಧೂರಿಯಾಗಿ ನೆರವೇರಿಸಿತ್ತು. ಇದರ ಕೆಲ ವಿಡಿಯೋಗಳನ್ನು ಕುಟುಂಬ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿತ್ತು. ಈ ವಿಡಿಯೋ ನೋಡಿದವರೆಲ್ಲಾ ಹೌಹಾರಿದ್ದಾರೆ. ಕಾರಣ ಮದುವೆ ಸಂದರ್ಭದಲ್ಲಿ ಎವ್ಕಾ ಧರಿಸಿದ್ದ ಬಟ್ಟೆಯ ಬೆಲೆ 1.75 ಲಕ್ಷ ಡಾಲರ್! ಎವ್ಕಾ ಮಹಾಕಾಯಳಾಗಿದ್ದರಿಂದ ಮದುವೆಯಾಗಲು ವರ ಸಿಕ್ಕಿರಲಿಲ್ಲ. ಇದೇ ವೇಳೆ ಆಕೆಯ ಗಾತ್ರಕ್ಕೆ ಸರಿಹೊಂದುವ ವರನೊಬ್ಬ ಸಿಕ್ಕಿದ್ದ. ಇದರಿಂದ ಸಂತಸಗೊಂಡಿದ್ದ ಆಕೆಯ ಪಾಲಕರು ಮದುವೆಯನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಿದ್ದರು. ನಾಲ್ಕು ದಿನ ನಡೆದ ಮದುವೆಗೆ ಸಾವಿರಾರು ಅತಿಥಿಗಳು ಬಂದು ನವ ಜೋಡಿಯನ್ನು ಹರಸಿದ್ದರು.

ನೋಟಿನ ಬಟ್ಟೆ

ಮದುವೆ ವೇಳೆ ಹಸೆಮಣೆ ಏರಿದ್ದ ಲುಕಾರಿಗೆ ಬಟ್ಟೆಯ ಮೇಲೆ ನೋಟುಗಳನ್ನು ಅಂಟಿಸಲಾಗಿತ್ತು. ಇದೇ ವೇಳೆ ನವ ದಂಪತಿಗಳ ಮೇಲೆ ಅಕ್ಷತೆಯಂತೆ ಚಿನ್ನವನ್ನು ಹಾಕಲಾಗಿತ್ತು! ದೇಶದಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ಮದುವೆ ಇದಾಗಿದೆ. ಮದುವೆಗೆ ಆಗಮಿಸಿದ್ದ ಮನರಂಜನಾ ತಂಡಕ್ಕೆ ಭಾರಿ ಉಡುಗೊರೆಯನ್ನೂ ನೀಡಲಾಗಿದೆ.

Comments are closed.