ಅಂತರಾಷ್ಟ್ರೀಯ

ಬಾಹ್ಯ ದಾಳಿಗೆ ಉತ್ತರಿಸುತ್ತೇವೆ: ಪಾಕಿಸ್ತಾನ ವಾಯುಪಡೆ

Pinterest LinkedIn Tumblr

pakಇಸ್ಲಮಾಬಾದ್: ನವದೆಹಲಿ ಮತ್ತು ಇಸ್ಲಮಾಬಾದ್ ನಡುವೆ ಬಿಗಡಾಯಿಸಿರುವ ರಾಜತಾಂತ್ರಿಕ ಮಾತುಕತೆ ಮತ್ತು ಗಡಿ ರೇಖೆಯಲ್ಲಿ ನಡೆಯುತ್ತರುವ ಗುಂಡಿನ ಕಾಳಗದ ಹಿನ್ನಲೆಯಲ್ಲಿ ನಾವು ಸದಾ ಎಚ್ಚರದಿಂದಿದ್ದೇವೆ ಮತ್ತು ಯಾವುದೇ ಬಾಹ್ಯ ದಾಳಿಗೆ ಉತ್ತರಿಸುತ್ತೇವೆ ಎಂದು ಪಾಕಿಸ್ತಾನ ವಾಯುಪಡೆ ಹೇಳಿದೆ.
ಗುರುವಾರ ಬೆಳಗ್ಗೆ ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತ ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನ ದೂರಿರುವ ಹಿನ್ನಲೆಯಲ್ಲಿ ವಾಯುಪಡೆ ಈ ಹೇಳಿಕೆ ನೀಡಿದೆ.
ಭಾರತ ನಡೆಸಿದೆ ಎಂದು ಹೇಳಿಕೊಳ್ಳಲಾಗುತ್ತಿರುವ ‘ಚಿಕಿತ್ಸಕ ದಾಳಿ’ ಸುಳ್ಳಿನ ಕಂತೆ ಎಂದು ಕೂಡ ಪಾಕಿಸ್ತಾನ ವಾಯುಪಡೆ ವಕ್ತಾರ ಹೇಳಿದ್ದಾರೆ.
ಯಾವುದೇ ಸಮಯದಲ್ಲಿ ಪಾಕಿಸ್ತಾನದ ವಾಯು ಗಡಿಯನ್ನು ನಮ್ಮ ವಾಯುಪಡೆ ಕಾಯಲಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಗಡಿನಿಯಂತ್ರಣಾ ರೇಖೆಯಲ್ಲಿ ಉಗ್ರರ ಅಡುಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದ್ದಾಗಿ ಭಾರತೀಯ ಸೇನೆ ತಿಳಿಸಿತ್ತು. ಹಾಗೆಯೇ ಪಾಕಿಸ್ತಾನ ಕದನವಿರಾಮ ಉಲಂಘಿಸಿ ಗುಂಡಿನ ಪ್ರಚೋದನೆ ನೀಡಿದೆ ಎಂದು ಕೂಡ ಭಾರತೀಯ ಸೇನೆ ಆರೋಪಿಸಿತ್ತು.
ಈ ಆರೋಪ ಪ್ರತ್ಯಾರೋಪಗಳಿಂದಾಗಿ ಅಣು ಶಸ್ತ್ರಾಸ್ತ್ರ ಸಜ್ಜಿತ ದೇಶಗಳ ನಡುವೆ ಉದ್ವಿಘ್ನ ವಾತಾವರಣ ಏರ್ಪಟ್ಟಿದೆ.

Comments are closed.