ಕ್ಯಾಲಿಫೋರ್ನಿಯಾ : ಅಮೆರಿಕಾದ ಯುವಕ ಯುವತಿಯರ ಕ್ಲಬ್ ಎದುರು ಬೆಳ್ಳಂಬೆಳಗ್ಗೆ ನಗ್ನವಾಗಿ ನಿಂತು ಹುಚ್ಚಾಟ ಮಾಡುತ್ತಿದ್ದ ಪುರುಷನೊಬ್ಬನನ್ನು ಇಲ್ಲಿನ ಒಸ್ನರ್ಡ್ ಪೊಲೀಸರು ಬಂಧಿಸಿದ್ದಾರೆ.
ನೈಟ್ ಕ್ಲಬ್ ಎದುರು ನಗ್ನವಾಗಿ ನಿಂತು ವಿಚಿತ್ರವಾಗಿ ಪೋಸ್ ನೀಡುತ್ತಿದ್ದ 30 ರ ಹರೆಯದಗಾರ್ಸಿಯಾ ಎಂಬಾತನನ್ನು ಕಂಡು ದಾರಿಹೋಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಹುಚ್ಚಾಟ ಹೆಚ್ಚು ಮಾಡಿದ ಆತ ಕಲ್ಲುಗಳನ್ನೂ ಎಸೆದಿದ್ದಾನೆ. ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಹತ್ತಿರದ ಪಾರ್ಕ್ ತುಂಬಾ ಅಡ್ಡಾಡಿ ಪೊಲೀಸರನ್ನು ಸತಾಯಿಸಿದ ಆತ ಕೊನೆಗೆ ಮಂಗನಂತೆ ಮರ ಏರಿ ಕುಳಿತಿದ್ದಾನೆ. ಅಷ್ಟೂ ಅಲ್ಲದೆ ಪೊಲೀಸರ ಮೈಮೇಲೆ ರಕ್ತವನ್ನೂ ಉಗುಳಿದ್ದಾನೆ.
ಆತನನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವೀಯಾದ ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಮಾದಕ ವ್ಯಸನಗಳ ಖಾಯ್ದೆ ಅಡಿ ಪ್ರಕರಣ ದಾಖಲಿಸಿ ಮನೆಗೆ ಕಳುಹಿಸಿದ್ದಾರಂತೆ!
-ಉದಯವಾಣಿ
Comments are closed.