ರಾಷ್ಟ್ರೀಯ

‘ಕಾಶ್ಮೀರದ ಸ್ವಾತಂತ್ರ್ಯ’ ಹೆಸರಿನಲ್ಲಿ ಪಾಕ್ ಸ್ವಾತಂತ್ರ್ಯೋತ್ಸವ ಆಚರಣೆ

Pinterest LinkedIn Tumblr

pakkನವದೆಹಲಿ, ಆ.14- ಕಾಶ್ಮೀರದ ಸ್ವಾತಂತ್ರ್ಯ ಹೆಸರಿನಲ್ಲಿ ಪಾಕಿಸ್ತಾನವು ತನ್ನ 70ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ ಎಂದು ದೆಹಲಿಗೆ ಪಾಕಿಸ್ತಾನದ ಹೈಕಮಿಷನರ್ ಆಗಿರುವ ಆಬ್ದುಲ್ ಬಸಿತ್ ಹೇಳಿದ್ದಾರೆ.

ಈ ಮೂಲಕ ಕಾಶ್ಮೀರದ ಬಗ್ಗೆ ತಾನು ಹೊಂದಿರುವ ನಿಲುವನ್ನು ಪಾಕ್ ಮತ್ತೊಮ್ಮೆ ದೃಢಪಡಿಸಿದಂತಾಗಿದೆ. ಪಾಕಿಸ್ತಾನದ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವು ಕಾಶ್ಮೀರ ಸ್ವಾತಂತ್ರ ಆಗಬೇಕು ಎಂಬ ಘೋಷಣೆಗೆ ಸಮರ್ಪಣೆಯಾಗಲಿದೆ ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಕಾಶ್ಮೀರ(ಭವಿಷ್ಯ) ಸ್ವಾತಂತ್ರ್ಯದ ಹೆಸರಿನಲ್ಲಿ ಪಾಕ್ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ ಎಂದು ಬಸಿತ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

Comments are closed.