ದೆಹಲಿ: ಸೌಂದರ್ಯ ಪ್ರಿಯ ಮಹಿಳೆಯರಿಗೆ ಕಂಕುಳದಲ್ಲಿ ಕಪ್ಪು ಕಲೆಗಳು ಯಾವಾಗಲೂ ದೊಡ್ಡ ಸಮಸ್ಯೆಯಾಗಿರುತ್ತದೆ. ಕೈ-ಕಾಲು, ಬೆರಳುಗಳ ಕಪ್ಪಾಗುವುದು ತಡೆಯುವ ಕುರಿತು ಮಹಿಳೆಯರು ಚಿಂತಿಸುತ್ತಾರೆ. ದೇಹದ ವಿವಿಧ ಭಾಗಗಲ್ಲಿ, ಶೇವಿಂಗ್ ಮಾಡಿರುವ ಜಾಗದಲ್ಲಿ ಕಪ್ಪು ಕಲೆಗಳು ಕಂಡು ಬಂದರೆ. ಈ ಸರಳ ಚಿಕಿತ್ಸೆ ಟ್ರೈ ಮಾಡುವುದು ಉತ್ತಮ. ಸುಂದರವಾಗಿ ಕಾಣಲು ಅಂದವಾದ ನೋಟ, ಆತ್ಮವಿಶ್ವಾಸ ಇವೆರಡು ಬೇಕು.
ದೇಹದ ಹಲವು ಭಾಗಗಳಲ್ಲಿ ಚರ್ಮ ಕಪ್ಪಾಗಿರುತ್ತದೆ. ಅಲ್ಲದೇ ನೀವೂ ಸಾಮಾನ್ಯವಾಗಿ ಕಪ್ಪು ಕಲೆ ಇರುವಂತಹ ಭಾಗದಲ್ಲಿ ಕೂದಲುಗಳನ್ನು ತೆಗೆಯಲು ಹೇರ್ ಕ್ರಿಮ್ ಬಳಕೆ ಮಾಡುತ್ತಿರಾ. ಇದರ ಹಿಂದೆ ಇದು ಕೂಡ ನಿಮ್ಮ ಕಪ್ಪು ಕಲೆಗೆ ಕಾರಣವಾಗಿರಬಹುದು.
ಈ ಭಾಗಗಳಲ್ಲಿ ಕೆಮಿಕಲ್ ಬ್ಲಿಚ್ ಮಾಡಿಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ. ತುಂಬಾ ಸೂಕ್ಷ್ಮತೆಯ ಭಾಗ ಇದಾಗಿರುವುದರಿಂದ ವೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ನೈಸರ್ಗಿಕ ಬ್ಲಿಚ್ ಮಾಡಿಕೊಳ್ಳುವುದು ಇದಕ್ಕೆ ಸುಲಭದ ಉಪಾಯವಾಗಿದೆ.
ಆಲುಗಡ್ಡೆಯನ್ನು ತೆಗೆದುಕೊಂಡು ನಿಮ್ಮ ದೇಹದ ಯಾಯ್ಯಾವ ಭಾಗಗಳಲ್ಲಿ ಕಪ್ಪು ಕಲೆ ಇದೆಯೋ (ಕಂಕುಳಲ್ಲಿ ಕಪ್ಪು ಕಲೆ) ಆ ಭಾಗಗಳಲ್ಲಿ ಆಲುಗಡ್ಡೆಯ ಕಟ್ ಮಾಡಿರುವ ಸ್ಲೈಸ್‌ಗಳನ್ನು ಕಪ್ಪು ಕಲೆ ಇರುವ ಕಡೆಗಳಲ್ಲಿ ಇಟ್ಟುಕೊಳ್ಳಬೇಕು. 20-25 ನಿಮಿಷಗಳವರೆಗೆ ಇಟ್ಟುಕೊಳ್ಳಬೇಕು. ಅಲ್ಲದೇ ಆಲುಗಟ್ಟೆ ಜ್ಯೂಸ್ ಮಾಡಿ ಉಜ್ಜಬೇಕು. 30 ನಿಮಿಷದ ಬಳಿಕ ನೀರಿನಿಂದ ತೊಳೆದುಕೊಳ್ಳಬೇಕು. ನಿಯಮಿತವಾಗಿ ಹೀಗೆ ಮಾಡುತ್ತಿದ್ರೆ ಕಪ್ಪು ಕಲೆಗಳು ಮಾಯವಾಗುತ್ತವೆ.
Comments are closed.