ಅಂತರಾಷ್ಟ್ರೀಯ

ನಿಮ್ಮ ಹೃದಯದ ಕಾಯಿಲೆಗೆ ಯಾರು ಹೊಣೆ ಗೊತ್ತಾ!

Pinterest LinkedIn Tumblr

heartದೆಹಲಿ: ಹೃದಯ ಕಾಯಿಲೆ ಸಮಸ್ಯೆ ಇದು ಕೇವಲ ಮಧ್ಯ ವಯಸ್ಕರಿಗೆ ಬರುವಂತಹ ಕಾಯಿಲೆಯಲ್ಲ. ಇಂದಿನ ದಿನಗಳಲ್ಲಿ ಯುವಕರು ಹೃದಯಘಾತದ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇದೊಂದು ಸಾಮಾನ್ಯ ವಿಷಯವಲ್ಲ, ಯಾರಿಗೆ ಬೇಕಾದರೂ ಹೃದಯಘಾತ ಉಂಟಾಗಬಹುದು. ಹೃದಯಘಾತ ಯಾವಾಗ ಸಂಭವಿಸುತ್ತೇ ಎನ್ನುವುದಕ್ಕೆ ಇಲ್ಲಿದೆ ಹಲವು ಕಾರಣಗಳು.

ಹೃದಯ ಕಾಯಿಲೆ ಬರದಂತೆ ಯುವಕರು ,ಮಧ್ಯ ವಯಸ್ಕರು ಎಚ್ಚರಿಕೆ ವಹಿಸಬೇಕು. ಇವೆಲ್ಲಾ ಅಭ್ಯಾಸಗಳು ನಿಮಗಿದ್ರೆ ಬಿಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

ತಂಬಾಕು ಸೇವನೆ:
ತಂಬಾಕು ಸೇವನೆಯಿಂದ ಹೃದಯ ಆರೋಗ್ಯಕ್ಕೆ ಮಾರಕವಾಗಬಲ್ಲದ್ದು.. ಇದರಿಂದ ಹೃದಯದ ಹಲವು ಕಾಯಿಲೆಗಳು ಬರಲು ಕಾರಣವಾಗುತ್ತದೆ.

ತೂಕ ಹೆಚ್ಚಳ:
ತೂಕ ಹೆಚ್ಚಳವು ಸಹ ಹೃದಯ ಕಾಯಿಲೆಗೆ ರಹದಾರಿ.. ಹೃದಯದ ಸಮಸ್ಯೆಗೆ ಇದು ಕೂಡ ಕಾರಣವಾಗಬಲ್ಲದ್ದು. ಆದ್ದರಿಂದ ತೂಕ ಹೆಚ್ಚಳ ಆಗದಂತೆ ನೋಡಿಕೊಳ್ಳಬೇಕು,

ದೈಹಿಕ ಚಟುವಟಿಕೆಯ ಕೊರತೆ:
ನಿಯಮಿತವಾಗಿ ವ್ಯಾಯಾಮದ ಕೊರತೆಯಿಂದಾಗಿಯೂ ಹೃದಯ ಕಾಯಿಲೆ ಅಥವಾ ಹೃದಯಾಘಾತ ಉಂಟಾಗುತ್ತದೆ. ದಿನ ನಿತ್ಯ ವ್ಯಾಯಾಮ ಮಾಡುವುದು ಉತ್ತಮ. ದೇಹದ ಫಿಟ್‌ನೆಸ್ ಹೃದಯ ಕಾಯಿಲೆಯನ್ನು ತಡೆಗಟ್ಟಬಲ್ಲದ್ದು.

ಹೆಚ್ಚು ಕೊಲೆಸ್ಟರಾಲ್:
ಹೆಚ್ಚು ಕೊಲೆಸ್ಟ್ರಾಲ್ ನಿಮ್ಮ ದೇಹದಲ್ಲಿದೆ ಹೃದಯದ ಹಲವು ಸಮಸ್ಯೆಗಳು ನಿಮಗೆ ಕಾಡುತ್ತವೆ. ಆದ್ದರಿಂದ ಊಟದಲ್ಲಿ, ಬ್ರೇಕ್ ಫಾಸ್ಟ್‌ನಲ್ಲಿ ಅಧಿಕ ಎಣ್ಣೆಯಿಂದ ಮಾಡಿದ ಆಹಾರವನ್ನು ಸೇವಿಸಬಾರದು.

ಮಧುಮೇಹ:
ಮಧುಮೇಹವು ಸಹ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮ ರಕ್ತದಲ್ಲಿ ಅಧಿಕ ಸಕ್ಕರೆ ಅಂಶದಿಂದ ಕೂಡಿರಬಾರದು. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು.

ವಿಪರೀತ ಮಧ್ಯಪಾನ ಸೇವನೆ:
ವಿಪರೀತವಾಗಿ ಮಧ್ಯಸೇವನೆ ಮಾಡುವರಿಗೆ ಹೃದಯದ ಕಾಯಿಲೆ ಕಾಣಿಸಿಕೊಳ್ಳುತ್ತವೆ.. ತಕ್ಷಣಕ್ಕೆ ಹೃದಯದ ಕಾಯಿಲೆ ಅಟ್ಯಾಕ್ ಮಾಡುತ್ತದೆ.ಅಲ್ಲದೇ ಇದು ರಕ್ತದೋತ್ತಡವನ್ನು ಹೆಚ್ಚಿಸುತ್ತದೆ. ಹಾಗೆ ಮಾದಕ ವಸ್ತು ಬಳಕೆ ಮಾಡುವುದರಿಂದ ಹೃದಯ ಕಾಯಿಲೆ ಬರೋದು ಗ್ಯಾರಂಟಿ.

Comments are closed.