ದೆಹಲಿ: ಸಿರಿಯಾದ ನಿರಾಶ್ರಿತೆ ಯುಸ್ರಾ ಮಾರ್ಡಿನಿ ಕಳೆದ ವರ್ಷ ಯುರೋಪ್‌ಗೆ ತೆರಳುವಾಗ ದೋಣಿ ಮುಳುಗಿದ್ದರಿಂದ ಸಮುದ್ರದಲ್ಲಿ ಈಜಿ ಜೀವದ ಅಪಾಯದಿಂದ ಪಾರಾಗಿದ್ದಳು. ಅಂತರಾಷ್ಟ್ರೀಯ ರಿಯೋ ಒಲಿಂಪಿಕ್ಸ್ ಸಮಿತಿ ನಿರಾಶ್ರಿತ ಕ್ರೀಡಾ ಪಟುಗಳನ್ನು ಗುರುತಿಸಿತ್ತು. ಈ ಕಾರಣಕ್ಕಾಗಿ ಮಾರ್ಡಿನಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಮಾರ್ಡಿನಿ ಬಟರ್ ಫ್ಲೈ ಹೀಟ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು ಗೆಲ್ಲಲು ಸಾಧ್ಯವಾಗಿರಲಿಲ್ಲ.
ನಿರಾಶ್ರಿತರ ಜತೆ ಸಮುದ್ರಕ್ಕೆ ಹಾರಿ ದೋಣಿಯನ್ನು ನೀರಿನಲ್ಲಿ ಮೂರು ಗಂಟೆಗಳ ಕಾಲ ಎಳೆದು 19 ಜನರ ಪ್ರಾಣ ಉಳಿಸಿದ್ದರು.
ಟರ್ಕಿಯಿಂದ ಮೆಡಿಟರೇನಿಯನ್ ದಾಟುವಾಗ ನೂರಾರು ನಿರಾಶ್ರಿತರು ಪ್ರಾಣ ಕಳೆದುಕೊಂಡಿದ್ದರು.
ಸಿರಿಯಾದಿಂದ ಎಲ್ಲಿಯೂ ನೆಲೆಯಿಲ್ಲದ ಈ ಯುವತಿ, ಸಾಗರ ದಾಟುವಾಗಲೇ ಈಕೆಯನ್ನು ಮುಗಿಸಲು ಸಾವು ಸಂಚು ರೂಪಿಸಿತ್ತು. ಆದ್ರೆ ಮಾರ್ಡನಿ ಮಾತ್ರ ತನ್ನ ಜೀವ ಉಳಿಸಿಕೊಂಡಿದ್ದಳು. ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಮಾರ್ಡಿನಿ ಒಂದರಲ್ಲಿ ತನ್ನ ಸಾಮರ್ಥ್ಯ ತೋರಲು ವಿಫಲರಾದರೂ, ಮತ್ತೊಂದು ಬಾರಿ ಅವಕಾಶ ಈಕೆಗಿದೆ.
ಮಾರ್ಗಮಧ್ಯೆ ದೋಣಿ ಮುಳುಗಿದರೆ ಎಲ್ಲರಿಗೂ ನೆರವು ನೀಡುವುದು ಅಸಾಧ್ಯವಾದ್ದರಿಂದ ನಾವು ಪ್ರಾಣ ಉಳಿಸಿಕೊಳ್ಳೋಣ ಎಂದು ಸಾರಾ ಸೋದರಿಗೆ ಮಾರ್ಡನಿ ತಿಳಿಸಿದ್ದಳು. ಆದರೆ ಎಂಜಿನ್ ನಿಂತು ದೋಣಿ ಮುಳುಗತೊಡಗಿದಾಗ ಉಳಿದವರು ಮುಳುಗದಂತೆ ಕಾಪಾಡಲು ಅವರಿಬ್ಬರ ಹೃದಯ ತುಡಿಯಿತು. ತಾವು ನೀರಿಗಿಳಿದು ದೋಣಿಯನ್ನು ಎಳೆದುಕೊಂಡು ಹೋಗಿ 19 ಜನರನ್ನು ಜೀವಸಹಿತ ಪಾರುಮಾಡಿದ್ದರು.
Comments are closed.