ರಾಷ್ಟ್ರೀಯ

ಆಘಾತಕಾರಿ: ಬಿಯರ್ ಕುಡಿಯುವಂತೆ ಮಗುವನ್ನು ಒತ್ತಾಯಿಸಿದ ಸ್ವಂತ ತಂದೆ

Pinterest LinkedIn Tumblr

ಬೆಎಅರಚೆನ್ನೈ: ಸ್ವಂತಃ ತಂದೆಯೇ ತನ್ನ ಮಗುವನ್ನು ಬಿಯರ್ ಕುಡಿಯುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ತನ್ನ 10 ವರ್ಷದ ಮಗುವನ್ನು ತಂದೆಯೊಬ್ಬ ಬಿಯರ್ ಕುಡಿಯುಂತೆ ಒತ್ತಾಯಿಸುತ್ತಿರುವುದರ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡ ನಗುತ್ತಾ ತನ್ನ ಮಗುವಿಗೆ ಬಿಯರ್ ಕುಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ವೇಳೆ ಮಗು ಬಿಯರ್ ಕುಡಿಯುತ್ತಿದ್ದಾಗ ಮಗುವಿನ ತಾಯಿ ಮೊಬೈಲ್‌ಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ.

ಆದ್ರೆ ಮಗು ಹೆಣ್ಣು ಅಥವಾ ಗಂಡು ಮಗು ಎಂಬುದರ ಕುರಿತು ತಿಳಿದು ಬಂದಿಲ್ಲ. ಇದೀಗ ಎಲ್ಲಾ ಕಡೆಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರಿಗೆ ಶಾಕ್ ಮೂಡಿಸಿದೆ.

Comments are closed.