ದೆಹಲಿ: ಭಾರತದ ಸ್ಫೋಟಕ ಬ್ಯಾಟ್ಸ್‌ಮೆನ್ ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಮತ್ತೆ ಲಂಡನ್‌ನಲ್ಲಿ ಜತೆಯಾಗಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಜತೆಗಿರುವ ಫೊಟೋಗಳು ವೈರಲ್ ಆಗಿದ್ದು. ಲಂಡನ್‌ನಲ್ಲಿ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಜೋಡಿ ಹಕ್ಕಿಗಳಂತೆ ಸಂಚರಿಸುತ್ತಿರುವುದು ಕಂಡು ಬಂದಿದೆ.
ವಿರಾಟ್ ಕೊಹ್ಲಿ ಅನುಷ್ಕಾ ಜತೆಗಿನ ಸಂಬಂಧದ ಕುರಿತು ಸೀಕ್ರೇಟ್ ಕಾಯ್ದುಕೊಂಡು ಬರುತ್ತಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ಜತೆಯಾಗಿ ಕಾಣಿಸಿಕೊಂಡಿರುವುದರ ಬಗ್ಗೆ ಇಂಟರ್ನೆಟ್‌ಗಳಲ್ಲಿ ಹರಿದಾಡುತ್ತಿದೆ.
ಈ ಫೊಟೋವನ್ನು ಇನ್‌ಸ್ಟಾಗ್ರಾಮ್ ಫ್ಯಾನ್ ಪೇಜ್‌ನಲ್ಲಿ ಶೇರ್ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ಅನುಷ್ಕಾ ಶರ್ಮಾ ಭಾರತ ತಂಡದ ಸ್ಪೋಟಕ ಬ್ಯಾಟ್ಸ್‌ಮೆನ್ ವಿರಾಟ್ ಕೊಹ್ಲಿ ಜತೆ ಸುತ್ತಾಡುವುದರ ಮೂಲಕ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಡೇಟಿಂಗ್ ಬಗ್ಗೆ ಎಲ್ಲಾ ಕಡೆ ಕೇಳಿ ಬರುತ್ತಿತ್ತು. ಇನ್ನೂ ಇಂಟರ್‌ಸ್ಟಿಂಗ್ ವಿಷ್ಯ ಎಂದರೆ ವಿರಾಟ್ ಕೊಹ್ಲಿ ಕುಟುಂಬದವರನ್ನು ಅನುಶ್ಕಾ ಶರ್ಮಾ ಭೇಟಿ ಮಾಡಿದ್ದರು ಎಂಬುದು ಹಲವರಲ್ಲಿ ಕುತೂಹಲ ಮೂಡಿಸಿತ್ತು.
ಶೀಘ್ರದಲ್ಲೇ ಅನುಷ್ಕಾ-ವಿರಾಟ್ ಗುಡ್ ನ್ಯೂಸ್ ನೀಡಲಿದ್ದಾರಾ? ಫೈನಲ್ ಆಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ? ಸದ್ಯಕ್ಕಂತು ಅಭಿಮಾನಿಗಳು ಪ್ರಶ್ನೆಯಾಗಿದೆ. ಆದ್ರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
Comments are closed.