ಅಂತರಾಷ್ಟ್ರೀಯ

ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ: ನಾಗರಿಕರ ರಕ್ಷಣೆಗೆ ಅಮೆರಿಕ ಮನವಿ

Pinterest LinkedIn Tumblr

india-intolerance-americaವಾಷಿಂಗ್ಟನ್: ಭಾರತದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆ ಮತ್ತು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ ನಾಗರಿಕರ ರಕ್ಷಣೆಗೆ ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಭಾರತ ಸರ್ಕಾರ ಸಾಧ್ಯವಾದುದನ್ನೆಲ್ಲ ಮಾಡಬೇಕು ಎಂದು ಹೇಳಿದೆ.

ದನದ ಮಾಂಸ ತಿಂದ ಜನರ ವಿರುದ್ಧ ನಡೆದ ಹಿಂಸಾಚಾರ ಮತ್ತು ಮಧ್ಯ ಪ್ರದೇಶದಲ್ಲಿ ಎಮ್ಮೆಯ ಮಾಂಸ ಹೊತ್ತುಕೊಂಡು ಹೋಗುತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ದನದ ಮಾಂಸ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಭಾವಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ ವರದಿಗಳಿಗೆ ಪ್ರತಿಕ್ರಿಯಿಸಿದ ಅಮೆರಿಕ ಸರ್ಕಾರದ ವಕ್ತಾರ ಜಾನ್ ಕಿರ್ಬಿ, ಜನರು ಒಗ್ಗಟ್ಟಿನಿಂದ ಜೀವನ ನಡೆಸಬೇಕು, ಭಾರತ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಸ್ವಾತಂತ್ರ್ಯವನ್ನು ನೀಡಿದೆ. ಅಂತಹದ್ದರಲ್ಲಿ ಇಂತಹ ಅಸಹಿಷ್ಣುತೆ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದೆ.

ವಿಶ್ವದ ದೇಶಗಳಲ್ಲಿ ಅಸಹಿಷ್ಣುತೆ, ಹಿಂಸಾಚಾರ ಹೆಚ್ಚಾದರೆ ಇದು ಸೌಹಾರ್ದಕ್ಕೆ ಧಕ್ಕೆಯನ್ನುಂಟುಮಾಡುತ್ತದೆ. ಯಾವೆಲ್ಲ ದೇಶಗಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತವೆಯೋ ಆ ದೇಶಗಳ ಸರ್ಕಾರಗಳು ಅಲ್ಲಿನ ಜನರ ರಕ್ಷಣೆಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ಅಮೆರಿಕ ಒತ್ತಾಯಿಸಿದೆ.

ಭಾರತ ಮತ್ತು ಅಮೆರಿಕ ದೇಶಗಳ ಹಿತಾಸಕ್ತಿಗೆ ಸಹಿಷ್ಣುತೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯರು ಸಹಿಷ್ಣುಗಳಾಗಿ ಬಾಳ್ವೆ ನಡೆಸುವ ಭಾವನೆಯನ್ನು ಮೂಡಿಸುವಲ್ಲಿ ಅಮೆರಿಕ ಕಾರ್ಯನಿರ್ವಹಿಸುತ್ತದೆ ಎಂದು ಕಿರ್ಬಿ ಹೇಳಿದ್ದಾರೆ.

ಸತ್ತ ಹಸುವಿನ ಚರ್ಮವನ್ನು ಸುಲಿಯುತ್ತಿದ್ದ ದಲಿತರ ಮೇಲೆ ಗುಜರಾತ್ ನ ಉನಾದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಾಪಕ ಟೀಕೆ ಕೇಳಿಬರುತ್ತಿರುವಾಗಲೇ ಅಮೆರಿಕದ ಈ ಪ್ರತಿಕ್ರಿಯೆ ಯೋಚನೆ ಮಾಡುವಂತೆ ಮಾಡಿದೆ.

Comments are closed.