ನ್ಯೂಯಾರ್ಕ್: ನಿರಂತರ ಹೊಸ ಪ್ರಯೋಗಳನ್ನು ನಡೆಸುತ್ತಿರುವ ಟ್ವಿಟರ್, ಈಗ ಇ- ಲೀಗ್ ಮೂಲಕ ತನ್ನ ಮೊದಲ ಇ-ಸ್ಪೋರ್ಟ್ಸ್ ಸ್ಪರ್ಧೆಯನ್ನು ನೇರ ಪ್ರಸಾರ ಮಾಡಲಿದೆ. ಮುಂದಿನ ವಾರದಿಂದ ಸ್ಪರ್ಧೆ ನೇರಪ್ರಸಾರವಾಗಲಿದ್ದು, ಕೌಂಟರ್ ಸ್ಟ್ರೈಕ್: ಗ್ಲೋಬಲ್ ಅಫೆನ್ಸೀವ್ ಎಂಬ ಶೂಟರ್ ವಿಡಿಯೋ ಗೇಮ್ ಗಳ ಮೂಲಕ ಗೇಮರ್ ಗಳನ್ನು ಸೆಳೆಯಲು ಸಾಧ್ಯವಾಗಲಿದೆ.
ಅಟ್ಲಾಂಟಾದಲ್ಲಿ ಮುಂದಿನ ಶುಕ್ರವಾರ ಹಾಗೂ ಶನಿವಾರ ನಡೆಯಲಿರುವ ಗೇಮಿಂಗ್ ಸ್ಪರ್ಧೆಯ ಸೆಮಿ-ಫೈನಲ್ ಹಾಗೂ ಚಾಂಪಿಯನ್ ಶಿಪ್ ಸ್ಪರ್ಧೆಯ ನೇರ ಪ್ರಸಾರ ಮಾಡಲು ಇತ್ತೀಚೆಗಷ್ಟೇ ಟ್ವಿಟರ್ ಪ್ರಸಿದ್ಧ ಇ-ಸ್ಪೋರ್ಟ್ಸ್ ಸಂಸ್ಥೆ ಇ-ಲೀಗ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ನೇರಪ್ರಾಸರದೊಂದಿಗೆ @EL ಎಂಬ ಟ್ವಿಟರ್ ಖಾತೆ ಸ್ಪರ್ಧೆಯ ಮುಖ್ಯಾಂಶ, ಜಿಫ್ ಫೈಲುಗಳು, ಸ್ಕೋರ್ ಅಪ್ ಡೇಟ್ ಗಳನ್ನು ನೀಡಲಿದೆ.
ಇ-ಲೀಗ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಇ-ಸ್ಪೋರ್ಟ್ಸ್ ಗೆ ಟ್ವಿಟರ್ ಮೂಲಕ ಗೇಮಿಂಗ್ ನ್ನು ಉತ್ತೇಜಿಸಲು ಸಾಧ್ಯವಾಗಲಿದೆ. ಇನ್ನು ಟ್ವಿಟರ್ ಗೆ ಗೇಮಿಂಗ್ ಮೂಲಕ ಹೆಚ್ಚು ಬಳಕೆದಾರರನ್ನು ಪಡೆಯಲು ಸಾಧ್ಯವಾಗಲಿದೆ. ಇ ಸ್ಪೋರ್ಟ್ಸ್ ಅಭಿಮಾನಿಗಳು ಟ್ವಿಟರ್ ಮೂಲಕ ಸ್ಪರ್ಧಾತ್ಮಕ ಗೇಮಿಂಗ್ ಬಗ್ಗೆ ಮಾತನಾದಬಹುದು ಎಂದು ಟ್ವಿಟರ್ ನ ಸಿಇಒ ಆಂಟೊನಿ ನೊಟೋ ಹೇಳಿದ್ದಾರೆ.
Comments are closed.