ಅಂತರಾಷ್ಟ್ರೀಯ

2850 ಸಿಬ್ಬಂದಿ ಕಡಿತಕ್ಕೆ ನಿರ್ಧರಿಸಿರುವ ಮೈಕ್ರೋಸಾಫ್ಟ್

Pinterest LinkedIn Tumblr

Microsoftwebಫಿನ್ಲ್ಯಾಂಡ್: ಸ್ಮಾರ್ಟ್ ಫೋನ್ ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಅಗ್ರಗಣ್ಯ ತಂತ್ರಾಂಶ ಅಭಿವೃದ್ಧಿ ಸಂಸ್ಥೆಯಾದ ಮೈಕ್ರೋಸಾಫ್ಟ್ ಕಾಪೋರೇಷನ್, ಮುಂದಿನ 12 ತಿಂಗಳ ಅವಧಿಯಲ್ಲಿ 2850 ಉದ್ಯೋಗಿಗಳ ಕಡಿತ ಮಾಡುವುದಾಗಿ ಪ್ರಕಟಿಸಿದೆ.

ಉದ್ಯೋಗಿಗಳಿಗೆ ಈ ಬಗ್ಗೆ ಪೂರ್ವ ಮಾಹಿತಿ ನೀಡಲಾಗಿದೆ. ಫಿನ್ಲ್ಯಾಂಡಿನ ಸ್ಮಾರ್ಟ್ ಫೋನ್ ಉದ್ಯಮ ಒಂದರಿಂದಲೇ 1850 ಉದ್ಯೋಗಿಗಳ ಕಡಿತ ಮಾಡಲಾಗಿದೆ. ಅದರ ಮುಂದುವರಿದ ಭಾಗವಾಗಿ ಮತ್ತೆ 2850 ನೌಕರರನ್ನು 2016 ರ ಅಂತ್ಯಕ್ಕೆ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಕಂಪೆನಿ ನಿರ್ಧರಿಸಿದೆ.

ಮೈಕ್ರೋಸಾಫ್ಟ್ ಮೊಬೈಲ್ ಫೋನ್ ಮತ್ತು ವ್ಯಾಪಾರ ತಂಡದಲ್ಲಿ 4700 ಸಿಬ್ಬಂದಿ ಕಡಿತ ಕಡಿತ ಅನಿವಾರ್ಯವಾಗಿದೆ. ಅದರ ಮೊದಲ ಹಂತವಾಗಿ ಈ ಕ್ರಮ ಜರುಗಿಸಲಾಗುವುದು ಎಂದು ಮೈಕ್ರೋಸಾಫ್ಟ್ ನ ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾದೆಲ್ಲ ಹೇಳಿದ್ದಾರೆ.

ಕಂಪೆನಿಯಲ್ಲಿ ಸದ್ಯ 1,14,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸೆಲ್ ಫೋನ್ ಕ್ಷೇತ್ರದ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಕಂಪೆನಿಗಳು ತೀವ್ರ ಪೈಪೋಟಿ ನೀಡುತ್ತಿದ್ದರೂ ವಹಿವಾಟು ಉನ್ನತೀಕರಣಕ್ಕೆ ಸಂಸ್ಥೆ ಹೋರಾಡುತ್ತಿದೆ. ಯಾವುದೇ ಹೊಸ ಮಾದರಿ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗೋಜಿಗೆ ಹೋಗದೆ ಯಥಾ ಸ್ಥಿತಿಯಲ್ಲೇ ಕಂಪೆನಿಯ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ ಎಂದವರು ಹೇಳಿದ್ದಾರೆ.

Comments are closed.