ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ‘ಅನ್ಇಂಡಿಯನ್‘ ಎಂಬ ಇಂಡೋ-ಆಸ್ಟ್ರೇಲಿಯನ್ ಚಿತ್ರದಲ್ಲಿ ನಟಿಸಿದ ಬೆನ್ನಲ್ಲೇ ಇದೀಗ ‘ಹೌಸ್ಫುಲ್ 4’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ..!
ಚಿತ್ರದ ಬಗ್ಗೆ ಮಾತನಾಡಲು ನಿರ್ದೇಶಕ ಅನುಪಮ್ ಶರ್ಮಾ ಹಾಗೂ ನಿರ್ವಪಕ ನದಿಯದ್ವಾಲಾ ಭೇಟಿ ಮಾಡಿದ್ದಾರೆ.
ಈ ಕುರಿತು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಬ್ರೆಟ್ ಲೀ ಸ್ಪಷ್ಟ ಉತ್ತರ ನೀಡಿಲ್ಲವಾದರೂ ನಿರಾಕರಿಸಿಲ್ಲ.
ಬ್ರೆಟ್ ಲೀಗೆ ಬಾಲಿವುಡ್ ಸಿನೆಮಾಗಳು ಎಂದರೆ ಬಲು ಇಷ್ಟವಂತೆ. ಅದರಲ್ಲೂ ಶಾರುಖ್ಖಾನ್ ಮತ್ತು ಪ್ರೀತಿ ಜಿಂಟಾ ಸಿನೆಮಾಗಳೆಂದರೆ ಬಲು ಅಚ್ಚುಮೆಚ್ಚು.
ಶಾರುಖ್ ಖಾನ್ ಹಾಗೂ ಪ್ರೀತಿ ಜಿಂಟಾ ಬಾಲಿವುಡ್ಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಪ್ರಶಂಸಿಸುತ್ತೇನೆ ಎಂದು ಬ್ರೆಟ್ ಲೀ ಹೇಳಿದ್ದಾರೆ.
Comments are closed.