ರಾಷ್ಟ್ರೀಯ

‘ಏಕ್ ಛೋಟಿ ಸಿ ಲವ್ ಸ್ಟೋರಿ’, ಪೊಲೀಸರಿಂದ ಸುಖಾಂತ್ಯ!

Pinterest LinkedIn Tumblr

FB-Loveಅಹಮದಾಬಾದ್: ಪ್ರೀತಿ ಕುರುಡು ಅಂತಾರಲ್ಲ ಬಹುಶಃ ಇದಕ್ಕೇ ಇರಬೇಕು. ಇಲ್ಲಿಬ್ಬರು ಅಪ್ರಾಪ್ತರು ಪ್ರೀತಿಯ ಕಥೆ ಕಟ್ಟಿಕೊಂಡು ನಾಪತ್ತೆಯಾಗಿ, ಕಡೆಗೂ ಪೊಲೀಸರ ಕೈಗೆ ಸಿಲುಕಿ ಅವರವರ ಮೆನ ಸೇರಿದ ಘಟನೆ ನಡೆದಿದೆ. ಅಷ್ಟಕ್ಕೂ ಇಬ್ಬರ ವಯಸ್ಸು ಎಷ್ಟಿರಬಹುದು ಅಂತೀರಿ…ಜಸ್ಟ್ 13!

ಅಚ್ಚರಿಯಾದರೂ ಇದು ಸತ್ಯ ಘಟನೆ. ಪ್ರತಿಷ್ಠಿತ ಮನೆತನದ ಬಾಲಕ-ಬಾಲಕಿ ಪ್ರತಿಷ್ಠಿತ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಆದ್ರೆ ಏನ್ಮಾಡ್ತೀರಿ, ತಾವಿನ್ನು ಆರನೇ ಕ್ಲಾಸ್ ಸ್ಟುಡೆಂಟ್ ಅನ್ನೋದನ್ನೇ ಮರೆತ ಈ ಜೋಡಿ ಬುಧವಾರ ಶಾಲೆಗೆ ಹೋದವರು ಮತ್ತೆ ಮನೆಗೆ ಹಿಂದಿರುಗಲೇ ಇಲ್ಲ, ನಾಪತ್ತೆ ಆಗಿದ್ದಾರೆ. ಕಂಗಾಲಾದ ಬಾಲಕ-ಬಾಲಕಿಯ ಪೋಷಕರು ಪೊಲೀಸರಿಗೊಂದು ದೂರು ಕೊಟ್ಟು ಕಾಣೆಯಾಗಿದ್ದಾರೆ ಎಂದು ಕೇಸ್ ದಾಖಲಿಸಿದರು.

ಹುಡುಕಾಟಕ್ಕೆ ಇಳಿದ ಪೊಲೀಸರಿಗೆ ಆರಂಭದಲ್ಲಿ ‘ಪ್ರೀತಿ’ ವಿಚಾರ ಗೊತ್ತಿರಲಿಲ್ಲ. ಆದರೆ ಇಲ್ಲಿಗೆ ಸ್ವಲ್ಪ ದೂರದ ಪಟ್ಟಣ ನಾದಿಯಾದ್ಗೆ ತೆರಳಿದ್ದ ಬಾಲಕನ ಫೋನ್ ಟ್ರೇಸ್ ಮಾಡಿದ ಪೊಲೀಸರಿಗೆ ಕಾಲ್ ಮಾಡಿದಾಗಲೇ ಇದು ‘ಛೋಟಿ ಸಿ ಲವ್ ಸ್ಟೋರಿ’ ಎಂದು ಗೊತ್ತಾಗಿದ್ದು. ಅಂತೂ ಗುರುವಾರ ಮಧ್ಯಾಹ್ನ ಜೋಡಿ ಇದ್ದ ಸ್ಥಳಕ್ಕೆ ತಲುಪಿದ ಪೊಲೀಸರು ಅವರನ್ನು ಪೋಷಕರ ಕೈತಲುಪಿಸಿದ್ದಾರೆ.

ಪೊಲೀಸ್ ಕ್ರೖೆಂ ಬ್ರಾಂಚ್ ನೀಡಿರುವ ಮಾಹಿತಿಯ ಪ್ರಕಾರ ಅನಿಲ್ ಮತ್ತು ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎನ್ನುವವರಿಬ್ಬರು ಅಹಮದಾಬಾದ್ ನಿವಾಸಿಗಳ ಮಕ್ಕಳಾಗಿದ್ದು, 6ನೇ ತರಗತಿಯಲ್ಲಿ ಓದುತ್ತಿದ್ದು, ಸ್ಕೂಲ್ ಯುನಿಫಾಮರ್್ನಲ್ಲಿಯೇ ಊರು ಬಿಟ್ಟು ಓಡಿಹೋಗಿದ್ದರು. ಮನೆಯಲ್ಲಿ ತಮ್ಮ ಪ್ರೀತಿಗೆ ಅಡ್ಡಿ ಪಡಿಸುತ್ತಾರೆನ್ನುವ ಭಯದಲ್ಲಿ ಓಡಿ ಹೋಗಿರುವುದಾಗಿಯೂ, ಸ್ನೇಹಿತರ ಮನೆಯಲ್ಲಿ ಬಟ್ಟೆ ಬದಲಾಯಿಸಿಕೊಂಡಿದ್ದಾಗಿಯೂ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಗುರುವಾರ ಮಧ್ಯಾಹ್ನ ಅನಿಲ್ ಮೊಬೈಲ್ ಆನ್ ಮಾಡಿದ್ದರಿಂದ ಪತ್ತೆಹಚ್ಚಲು ಸಾಧ್ಯವಾಯಿತು. ಇಲ್ಲದೇ ಇದ್ದಲ್ಲಿ ಅಷ್ಟು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ರಡಾರ್ ಸಹಾಯದಿಂದ ಸ್ಥಳೀಯ ಕ್ರೖೆಂ ಬ್ರಾಂಚ್ಗೆ ತಿಳಿಸಿ ಅವರನ್ನು ವಶಕ್ಕೆ ಪಡೆಯಲಾಗಿದೆ . ತಕ್ಷಣ ಬಾಲಕ-ಬಾಲಕಿ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಆಗಮಿಸಿದರು. ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.