ಅಂತರಾಷ್ಟ್ರೀಯ

40 ಲಕ್ಷ ಚದರ ಕಿ.ಮೀ ಕುಗ್ಗಿದ ರಂಧ್ರ; ರಾಸಾಯನಿಕಗಳಿಗೆ ನಿಯಂತ್ರಣ: ಅಂಟಾರ್ಕ್ಟಿಕ್‌ ಓಝೋನ್‌ ಪದರು ಸಂರಕ್ಷಣೆಗೆ ತೇಪೆ

Pinterest LinkedIn Tumblr

randraವಾಷಿಂಗ್ಟನ್‌ (ನ್ಯೂಯಾರ್ಕ್ ಟೈಮ್ಸ್ ): ಪರಿಸರ ಪ್ರೇಮಿಗಳಿಗೆ ಸಂತಸದ ಸುದ್ದಿ. ಅಂಟಾರ್ಕ್ಟಿಕ್‌ ಪ್ರದೇಶದ ಓಝೋನ್‌ ಪದರಿನಲ್ಲಿ ಉಂಟಾಗಿದ್ದ ರಂಧ್ರ ಈಗ ಕಿರಿದಾಗುತ್ತಿದೆ.

ಅತೀ ನೆರಳೆಯ ಕಿರಣಗಳಿಂದ ಜೀವ ಸಂಕುಲವನ್ನು ಸಂರಕ್ಷಿಸುವ ಓಝೋನ್‌ ಪದರನ್ನು ಸಂರಕ್ಷಿಸುವ ಯತ್ನಗಳಿಗೆ ಫಲ ದೊರೆತಿರುವುದು ವಿಜ್ಞಾನಿಗಳಲ್ಲೂ ಸಂತಸ ಮೂಡಿದೆ.

ಓಝೋನ್‌ ಪದರಿಗೆ ಹಾನಿ ಮಾಡುವ ರಾಸಾಯನಿಕಗಳನ್ನು ನಿಷೇಧಿಸಿದ ಮೂರು ದಶಕಗಳ ನಂತರ ಈಗ ಫಲಿತಾಂಶ ದೊರೆತಿದ್ದು, ವಾತಾವರಣದಲ್ಲೂ ಬದಲಾವಣೆಯಾಗಿರುವ ಸಂಕೇತಗಳು ದೊರೆತಿವೆ ಎಂದು ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ಇದುವರೆಗೆ ನಡೆಸಿದ ಅಧ್ಯಯನದಿಂದ ಓಝೋನ್‌ ಪದರದಲ್ಲಿನ ರಂಧ್ರವು 40 ಲಕ್ಷ ಚದರ ಕಿಲೋ ಮೀಟರ್‌ಗಳಷ್ಟು ಕುಗ್ಗಿದೆ.

ಭಾರತದ ಬಹುತೇಕ ಭೂಪ್ರದೇಶಕ್ಕೆ ಇದು ಸರಿಸಮಾನವಾಗಿದೆ. 2000ನೇ ಇಸ್ವಿಯಿಂದ ಈ ರಂಧ್ರ ಕುಗ್ಗುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಮುಖವಾಗಿ ಕ್ಲೋರೋ ಫ್ಲೋರೋ ಕಾರ್ಬನ್‌ನಿಂದ (ಸಿಎಫ್‌ಸಿ) ಓಝೋನ್‌ ಪದರಿಗೆ ಹಾನಿ ಉಂಟಾಗುತ್ತಿತ್ತು. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎನ್ನುವ ಕೂಗು ಜಗತ್ತಿನಾದ್ಯಂತ ಕೇಳಿ ಬಂದಿತ್ತು.

1984ರಲ್ಲಿ ಅಂಟಾರ್ಕ್ಟಿಕ್‌ನ ಓಝೋನ್ ಪದರಿನಲ್ಲಿ ರಂಧ್ರ ಪತ್ತೆಯಾದ ನಂತರ ಮತ್ತಷ್ಟು ಆತಂಕ ಮೂಡಿಸಿತ್ತು.

ಬಳಿಕ ಕೆನಡಾದ ಮಾಂಟ್ರಿಯಲ್‌ನಲ್ಲಿ 1987ರಲ್ಲಿ ಹಂತ ಹಂತವಾಗಿ ಸಿಎಫ್‌ಸಿ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸಿ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬಹುತೇಕ ದೇಶಗಳು ಸಹಿ ಹಾಕಿದವು.

‘ಸಂಪೂರ್ಣವಾಗಿ ರಂಧ್ರ ಮುಚ್ಚಲು ಇನ್ನೂ ಹಲವಾರು ವರ್ಷಗಳು ಬೇಕಾಗಬಹುದು. ಆದರೆ, ಇದು ದೀಘ್ರ ಪ್ರಕ್ರಿಯೆಯ ಆರಂಭ’ ಎಂದು ಮ್ಯಾಸಾಚುಸೆಟ್ಸ್‌ ತಂತ್ರಜ್ಞಾನ ಸಂಸ್ಥೆಯ ರಾಸಾಯನಿಕ ವಿಜ್ಞಾನಿ ಸುಸಾನ್‌ ಸೊಲೊಮಾನ್‌ ಹೇಳುತ್ತಾರೆ.

ಹಲವು ದಶಕಗಳ ಕಾಲ ರೆಫ್ರಿಜರೇಟರ್‌, ಡ್ರೈ ಕ್ಲೀನಿಂಗ್‌ ಯಂತ್ರ ಇತ್ಯಾದಿಗಳಲ್ಲಿ ಸಿಎಫ್‌ಸಿ ಬಳಕೆಯಾಗುತ್ತಿತ್ತು. ಇದರಿಂದ ಓಝೋನ್‌ ಪದರಕ್ಕೆ ಹಾನಿಯಾಗುತ್ತಿತ್ತು.

ಸೂರ್ಯನಿಂದ ಹೊರಬರುವ ಅತೀ ನೆರಳೆ ವಿಕಿರಣಗಳನ್ನು ಓಝೋನ್‌ ಪದರ ತಡೆಯುತ್ತಿತ್ತು.

ಈ ಮೂಲಕ ಚರ್ಮದ ಕ್ಯಾನ್ಸರ್‌ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದರು.

‘ಹಲವು ದಶಕಗಳಿಂದ ಸಿಎಫ್‌ಸಿ ವಾತಾವರಣದಲ್ಲಿರುವುದರಿಂದ ಹಾನಿಗೊಂಡಿರುವ ಓಝೋನ್‌ ಪದರವನ್ನು ಪುನರುಜ್ಜೀವನಗೊಳಿಸುವುದು ನಿಧಾನ ಪ್ರಕ್ರಿಯೆ. ಇದು ಒಂದು ರೀತಿಯಲ್ಲಿ ರೋಗಿಗೆ ಚಿಕಿತ್ಸೆ ನೀಡುವ ರೀತಿಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ’ ಎಂದು ಡಾ. ಸೊಲೊಮನ್‌ ಹೇಳುತ್ತಾರೆ.

‘ಮೊದಲು ಓಝೋನ್‌ ಪದರದ ವಾತಾವರಣವೇ ಸಂಪೂರ್ಣವಾಗಿ ಹದಗೆಟ್ಟಿತ್ತು. ನಂತರ, ವಾತಾವರಣ ಕಲುಷಿತವಾಗುವುದನ್ನು ಸ್ಥಗಿತಗೊಳಿಸಲಾಯಿತು.

ಈಗ ಸ್ಥಿರವಾಗಿದ್ದರೂ ಇನ್ನೂ ಕೆಟ್ಟ ಸ್ಥಿತಿಯಲ್ಲಿದೆ. ಹೀಗಾಗಿ ಸುಧಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಮಾಂಟ್ರಿಯಲ್‌ ಒಪ್ಪಂದಕ್ಕೆ ಒತ್ತಾಯಿಸಿದ ವಿಜ್ಞಾನಿಗಳು ಹೇಳುತ್ತಾರೆ.

ಆರ್ಕ್ಟಿಕ್‌ನಲ್ಲಿ ಓಝೋನ್‌ ಪದರಕ್ಕೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ, ಅಂಟಾರ್ಕ್ಟಿಕ್‌ ಪ್ರದೇಶದಲ್ಲಿ ಶೀತ ವಾತಾವರಣ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು ಎಂದು ಅವರು ಹೇಳಿದ್ದಾರೆ.

Comments are closed.