ರಾಷ್ಟ್ರೀಯ

ಶಿಯೋಮಿ ಎಂಐ ಮ್ಯಾಕ್ಸ್ ಬಿಡುಗಡೆ ಕಾರ್ಯಕ್ರಮದಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು

Pinterest LinkedIn Tumblr

xiaomi-mi-maxನವದೆಹಲಿ: ಇಲ್ಲಿನ ಜವಾಹರ್ ಲಾಲ್ ನೆಹರು ಕ್ರೀಡಾಂಗಣಗದಲ್ಲಿ ಕಳೆದ ಗುರುವಾರ ಶಿಯೋಮಿ ಕಂಪನಿ ಎಂ ಐ ಮ್ಯಾಕ್ಸ್ ಫಾಬ್ಲೆಟ್ ಬಿಡುಗಡೆ ಸಮಾರಂಭ ನಡೆದಿದ್ದು, ಸಮಾರಂಭದಲ್ಲಿ ಶಿಯೋಮಿ ಅಭಿಮಾನಿಗಳು ರೊಚ್ಚಿಗೆದ್ದ ಘಟನೆ ವರದಿಯಾಗಿದೆ.

ಶಿಯೋಮಿ ಕಂಪನಿ ಹಮ್ಮಿಕೊಂಡಿದ್ದ ಸಮಾರಂಭದ ಅವ್ಯವಸ್ಥೆಯ ಬಗ್ಗೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಕಾರ್ಯಕ್ರಮ ಆರಂಭವಾದ ಕೆಲವೇ ಗಂಟೆಗಳಲ್ಲಿ ಕ್ರೀಡಾಂಗಣದ ಒಳಗೆ ಕುಳಿತಿದ್ದ ಕೆಲವು ಜನರು ಶಿಯೋಮಿ ಕಂಪನಿ ಮತ್ತು ಅಲ್ಲಿನ ಉದ್ಯೋಗಿಗಳ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದರು.
ಇದಕ್ಕೆ ಕಾರಣ ಏನೆಂದು ಕೇಳಿದಾಗ, ತಮ್ಮ ಕೆಲವು ಗೆಳೆಯರನ್ನು ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಅವರನ್ನು ಹೊರಗೆ ನಿಲ್ಲಿಸಲಾಗಿದೆ. ಕಾರ್ಯಕ್ರಮದ ವ್ಯವಸ್ಥೆ ಸರಿಯಿಲ್ಲ ಎಂದು ಅಭಿಮಾನಿಗಳು ದೂರಿದ್ದಾರೆ.

ಅಷ್ಟೇ ಅಲ್ಲದೆ ಸಮಾರಂಭದಲ್ಲಿ ವಿತರಿಸಲಾಗಿದ್ದ ಶಿಯೋಮಿ ಟೀ ಶರ್ಟ್ ತಮಗೆ ಸಿಗಲಿಲ್ಲ ಎಂಬುದು ಕೆಲವರ ಸಿಟ್ಟಿಗೆ ಕಾರಣವಾಗಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನು ಜೈನ್, ಸದ್ಯ ಟೀ ಶರ್ಟ್‍ಗಳ ಕೊರತೆ ಇದೆ. ಇಂದಲ್ಲದೇ ಇದ್ದರೆ ಇನ್ನೊಂದು ದಿನ ಸಮಾರಂಭದಲ್ಲಿ ಉಚಿತ ಟೀ ಶರ್ಟ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿ ದೆಹಲಿ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಗಿ ಬಂತು, ಸಮಾರಂಭದಲ್ಲಿ ಅಭಿಮಾನಿಗಳ ವರ್ತನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು.

Comments are closed.